Mon. Dec 23rd, 2024

ಅಕ್ರಮ ಸಂಬಂಧಕ್ಕೆ ಅಡ್ಡಿ:ಚಿಕ್ಕಮ್ಮನ ಜತೆ ಸೇರಿ ಪತ್ನಿಯ ಕೊಂದ ಪಾಪಿ ಪತಿ

Share this with Friends

ಬಾಗಲ್ಪುರ್,ಆ.8: ಅಕ್ರಮ ಸಂಬಂಧಕ್ಕೆ ಅಡ್ಡಿಯಾದಳೆಂದು ಪತ್ನಿಯನ್ನೇ ಪತಿ ಹಾಗೂ ಆತನ ಚಿಕ್ಕಮ್ಮ ಕೊಲೆ ಮಾಡಿರುವ ಹೀನ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ.

ಶಬ್ನಮ್ ಖಾತೂನ್ ಎಂಬಾಕೆ ಪತಿ ಮತ್ತು‌ ಆತನ ಚಿಕ್ಕಮ್ಮನಿಂದ ಕೊಲೆಯಾದ ಮಹಿಳೆ.ಈಕೆಯ ಪತಿ ಫಯಾಝ್ ಹಾಗೂ ಚಿಕ್ಕಮ್ಮ ರೀನಾ ಖಾತೂನ್ ಸೇರಿ ಆ್ಯಸಿಡ್ ಕುಡಿಸಿ, ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಮೃತದೇಹವನ್ನು ಕೋಸಿ ನದಿಗೆ ಎಸೆದಿದ್ದಾರೆ.

ಎರಡು ವರ್ಷಗಳ ಹಿಂದೆ ಫಯಾಝ್, ಶಬ್ನಮ್ ಖಾತೂನ್ ರನ್ನು ವಿವಾಹವಾಗಿದ್ದ. ವಿವಾಹವಾದರೂ ಫಯಾಝ್ ತನ್ನ ಚಿಕ್ಕಮ್ಮ ರೀನಾ ಖಾತೂನ್ ಜೊತೆಗೆ ಅಕ್ರಮ ಸಂಬಂಧ ಮುಂದುವರಿಸಿದ್ದ.

ಇದನ್ನು ಶಬ್ನಮ್ ವಿರೋಧಿಸಿದ್ದಳು,ಹಾಗಾಗಿ ಪತಿ,ಪತ್ನಿ ನಡುವೆ ಸದಾ ಜಗಳವಾಗುತ್ತಿತ್ತು.
ತಮ್ಮ ಸಂಬಂಧಕ್ಕೆ ಅಡ್ಡಿ ಎಂದು ಕೊಂಡು ಫಯಾಝ್ ಮತ್ತು ರೀನಾ ಖಾತೂನ್ ಸಂಚು ಮಾಡಿ ಶಬ್ನಮ್ ಳನ್ನು ಹೀನಾಯವಾಗಿ ಕೊಂದಿದ್ದಾರೆ.

ಪೊಲೀಸರು‌ ಫಯಾಜ್ ಮತ್ತು ರೀನಾಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post