ಮೈಸೂರು, ಫೆ.17: ತಮಿಳು ನಾಡಿಗೆ ನೀರು ಹರಿಯುವುದನ್ನು ವಿರೋಧಿಸಿ ಕಾವೇರಿ ಕ್ರಿಯಾ ಸಮಿತಿ ಪ್ರತಿ ಶನಿವಾರ ಧರಣಿ ನಡೆಸಲಿದೆ.
ಅದರಂತೆ ಇಂದು ಧರಣಿ ನಡೆಸಿ
ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ನ್ಯಾಯಮಂಡಳಿಯ ವಿರುದ್ಧ ಸರ್ವಪಕ್ಷಗಳ ಸಹಕಾರದಿಂದ ಸರ್ಕಾರದಿಂದ ಸುಗ್ರಿವಾಜ್ಞೆ ಹೊರಡಿಸಿ 5 ಟಿ.ಎಂ.ಸಿ ನೀರನ್ನು ಉಳಿಸಿಕೊಳ್ಳಲೇಬೇಕೆಂದು ಒತ್ತಾಯಿಸಲಾಯಿತು.
ಕಾವೇರಿಕ್ರಿಯಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ ಕಾವೇರಿ ನೀರು ನಿರ್ವಹಣಾ ಮಂಡಳಿಯ ತೀರ್ಮಾನದ ವಿರುದ್ಧ ಶತದಿನ ಧರಣಿ ಸತ್ಯಾಗ್ರಹ ಆಚರಿಸಿದ ಹಿನ್ನಲೆಯಲ್ಲಿ ಚಳುವಳಿಯನ್ನು ಜೀವಂತವಾಗಿ ಇರಿಸಲು ವಾರಕ್ಕೊಂದು ದಿನ ಧರಣಿ ಸತ್ಯಾಗ್ರಹದ ಹಾಗೂ ಸಹಿ ಸಂಗ್ರಹ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಕಾವೇರಿ ಕ್ರಿಯಾಸಮಿತಿಯ ಸದಸ್ಯರಾದ ತೇಜಸ್ ಲೋಕೇಶ್‌ಗೌಡ, ವರಕೋಡು ಕೃಷ್ಣಗೌಡ, ಪ್ರಭುಶಂಕರ್, ಪ್ರಭಾಕರ್, ಹನುಮಂತಯ್ಯ, ಕೃಷ್ಣಪ್ಪ, ಶಿವಲಿಂಗೇಗೌಡ, ಸೋಮೇಗೌಡ, ಡಾ.ರಾಜ್ ಸಂಘದ, ಮಹದೇವಸ್ವಾಮಿ, ನಾಗರಾಜು, ಬೋಗಾದಿ ಸಿದ್ದೇಗೌಡ, ರವೀಶ್, ಚಲನಚಿತ್ರ ನಿರ್ಮಾಪಕರಾದ ಶಿವಾಜಿ, ಗೌರಮ್ಮ, ಲಕ್ಷ್ಮಿ ಶಿವರಾಜು, ಭಾಗ್ಯಮ್ಮ ಬಿ.ಜೆ.ಪಿ ಮಂಜುಳಾ, ವಸುಮತಿ, ಶುಭತ್ರಿ, ಹನುಮಂತೇಗೌಡ, ಮಹೇಶ್‌ಗೌಡ, ಆಶೋಕ್‌ಗೌಡ, ಶ್ರೀನಿವಾಸ್, ವಿದ್ಯಾರ್ಥಿ ಕ್ರಿಯಾಸಮಿತಿಯ ಕೀರ್ತಿರಾಜ್, ಹೇಮಂತ್, ಆಕಾಶ್, ಕೀರ್ತಿರಾಜ್, ಸಂಜಯ್, ವಿಷ್ಣು ಮುಂತಾದವರು ಭಾಗವಹಸಿದ್ದರು.