Mon. Dec 23rd, 2024

ಹಗಲಿನಲ್ಲೇ ಜಮೀನಿನಲ್ಲಿ ಚಿರತೆ‌ ಕಂಡು‌ ಆತಂಕಕ್ಕೆ‌ ಒಳಗಾದ‌ ಗ್ರಾಮಸ್ಥರು

Share this with Friends

ಹಾಸನ,ಫೆ.17: ಹಗಲಿನಲ್ಲೇ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡ ಕಾರಣ ರೈತರು‌ ಜಮೀನಿಗೆ ಹೋಗಲು ಆತಂಕ ಎದುರಾಗಿದೆ.

ಚಿರತೆ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ದೊಡ್ಡೇನಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಚಿರತೆ‌ ತಂತಿ‌ ಬೇಲಿಯಲ್ಲಿ ಇದ್ದುದನ್ನು ರೈತರೊಬ್ಬರು‌ ಗಮನಿಸಿ ಊರಿಗೆ ಓಡಿ ಬಂದು ಇತರರಿಗೆ ತಿಳಿಸಿದ್ದಾರೆ.

ತಕ್ಷಣ ಅರಣ್ಯ ಇಲಾಖೆಗೆ ಗ್ರಾಮಸ್ಥರು
ಮಾಹಿತಿ ನೀಡಿದ್ದು,ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ತಂತಿ ಬೇಲಿಗೆ ಸಿಲುಕಿಕೊಂಡಿದ್ದ ಚಿರತೆ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿತ್ತು.

ಇಲಾಖೆಯ ವೈದ್ಯರು ಸ್ಥಳಕ್ಕೆ ಅಗಮಿಸಿ ಅರವಳಿಕೆ ಚುಚ್ಚುಮದ್ದು ನೀಡಿದ ಕೂಡಲೇ ಜ್ಞಾನತಪ್ಪಿ ಬಿದ್ದ ಚಿರತೆಯನ್ನು
ತಂತಿ ಬೇಲಿಯಿಂದ ಬಿಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು.

ಮೂರು ವರ್ಷದ ಗಂಡು ಚಿರತೆಯನ್ನು ಅರಣ್ಯಕ್ಕೆ ಬಿಡಲಾಗಿದ್ದು, ದೊಡ್ಡೇನಹಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.


Share this with Friends

Related Post