Mon. Dec 23rd, 2024

ಶಿವಯೋಗದ ಮಹತ್ವ ಕುರಿತು ಉಪನ್ಯಾಸ

Share this with Friends

ಮೈಸೂರು, ಆ.10: ಬಸವಭಾರತ ಪ್ರತಿಷ್ಠಾನ ಮತ್ತು ಮೈಸೂರಿನ ಶಿವಶ್ರೀ ವಿದ್ಯಾರ್ಥಿ ನಿಲಯ ಸಹಯೋಗದಲ್ಲಿ ಶಿವಯೋಗದ ಮಹತ್ವ ಮತ್ತು ಅಕ್ಕ ನಾಗಮ್ಮನವರು ಬಸವಣ್ಣನವರ ಮೇಲೆ ಬೀರಿದ ಪ್ರಭಾವದ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಪ್ರಾಧ್ಯಾಪಕರಾದ ಡಾ.ಜ್ಯೋತಿ ಶಂಕರ ಅವರು ಅಕ್ಕ ನಾಗಲಾಂಬಿಕೆ ಬಸವಣ್ಣನವರಿಗೆ ಬಸವನ ಬಾಗೇವಾಡಿಯಿಂದ ಹಿಡಿದು ಕಲ್ಯಾಣದಲ್ಲಿ ನಡೆದ ಸಮಾಜೋಧಾರ್ಮಿಕ ಕಾರ್ಯಕ್ರಮಗಳಿಗೆ ಹೇಗೆ ಬೆನ್ನೆಲುಬಾಗಿದ್ದರು ಎಂದು ಬಿಡಿಸಿ ಹೇಳಿದರು.

ಕಲ್ಯಾಣದ ಹತ್ಯಾಕಾಂಡ ನಂತರ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ವಹಿಸಿದ ಪಾತ್ರ,ಶರಣ ಚನ್ನಬಸವಣ್ಣನವರನ್ನು ಕಳೆದುಕೊಂಡು ತರೀಕೆರೆಯಲ್ಲಿ ಲಿಂಗೈಕ್ಯ ಆಗುವವರೆಗೆ ತೋರಿದ ಹೋರಾಟ ಮನೋಭಾವ ಅನುಕರಣೀಯವೆಂದು ತಿಳಿಸಿದರು.

ತಮ್ಮ ಓದಿನ ಜೊತೆ ವಿದ್ಯಾರ್ಥಿನಿಯರು ದಿನದ 10 ನಿಮಿಷವಾದರು ವಚನಗಳ ಬಗ್ಗೆ ತಿಳಿದುಕೊಳ್ಳಬೇಕು,ಅವು ನಮ್ಮ ಕಷ್ಟಕಾಲದಲ್ಲಿ ಕೈಹಿಡಿಯುವುದು ಎಂದು ಕಿವಿ ಮಾತು ಹೇಳಿದರು.

ಪೂಜ್ಯ ಬಸವಯೋಗಿ ಪ್ರಭುಗಳು ಶಿವಯೋಗದ ಬಗ್ಗೆ ವಿವರವಾಗಿ ತಿಳಿಸಿ,
ನಮ್ಮೂಳಗೇ ಶಿವನಿದ್ದಾನೆ ,ಭವ ರೋಗಕ್ಕೆ ಶಿವಯೋಗವೇ ಮುದ್ದು ಎಂದು ಹೇಳಿದರು.

ಇಷ್ಟಲಿಂಗದ ಹಿಂದೆ ವಿಜ್ಞಾನವಿದೆ, ಶರಣರ ಪ್ರಕಾರ ಆತ್ಮಕ್ಕೆ ಹೆಣ್ಣು ಗಂಡು ಎಂಬುದಿಲ್ಲ , ಆದುದರಿಂದ ಇಷ್ಟಲಿಂಗದ ಧಾರಣೆ ಮಾಡಿಕೊಂಡು ಶಿವಯೋಗ ಮಾಡಿದರೆ ಸಾಕು , ಯಾವುದೇ ಕಾಲ್ಪನಿಕ ದೇವರ ಹಂಗು ಬೇಕಿಲ್ಲವೆಂದು ತಿಳಿಸಿದರು.

ಶರಣೆ ಚೂಡಾಮಣಿ ವಚನ ಗಾಯನ ಮಾಡಿದರು .ಶಿವಶ್ರೀ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಬಸವಪರ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

ಶಿವಶ್ರೀ ವಿದ್ಯಾರ್ಥಿನಿಲಯದ ರೂವರಿಗಾಳಾದ ಶರಣೆ ಪ್ರಭಾಮಣಿ ಯವರು ತಮ್ಮ ಮನೆಯನ್ನೆ ವಿದ್ಯಾರ್ಥಿ ನಿಲಯವಾಗಿ ಪರಿವರ್ತನೆ ಮಾಡಿ ,ತಮ್ಮೆಲ್ಲಾ ಸಂಪಾದನೆಯನ್ನು ಇದಕ್ಕೆ ಸಮರ್ಪಣೆ ಮಾಡಿದ್ದಾರೆ.

ಬಸವಭಾರತ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರುದ್ರಪ್ಪ, ಪ್ರಸನ್ನ. ಎಸ್.ಎಂ ಮತ್ತಿತರರು
ಉಪಸ್ಥಿತರಿದ್ದರು.

ಬಸವಪ್ರಭುಸ್ವಾಮೀಗಳು , ಜ್ಯೋತಿ ಶಂಕರ್ ಮತ್ತು ಚೂಡಾಮಣಿಯವರನ್ನು ಇದೇ ವೇಳೆ ಸನ್ಮಾನಿಸಲಾಯಿತು .

ಕಾರ್ಯಕ್ರಮದ ರೂವಾರಿಗಳೂ ದಾಸೋಹಿಗಳಾದ ಪ್ರಭಾಮಣಿಯವರನ್ನು ಬಸವಭಾರತ ಪ್ರತಿಷ್ಠಾನದ ಪರವಾಗಿ ಗೌರವಿಸಲಾಯಿತು.


Share this with Friends

Related Post