Wed. Dec 25th, 2024

ಪ್ರಾಣಿಗಳಿಗೆ ಸ್ವಾತಂತ್ರ್ಯ ಬೇಕು:ಪ್ರಾಣಿಪ್ರಿಯರ ಆಗ್ರಹ

Share this with Friends

ಮೈಸೂರು, ಆ.11: ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ,ಅವುಗಳಿಗೂ ಸ್ವಾತಂತ್ರ್ಯ ಬೇಕು ಎಂದು ಹಲವಾರು ಪ್ರಾಣಿ ಪ್ರಿಯರು ಪ್ರತಿಪಾದಿಸಿದರು.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಹಲವಾರು ಕಾರ್ಯಕರ್ತರು ಟೌನ್‌ಹಾಲ್‌ ಮುಂದೆ ಭಿತ್ತಿಚಿತ್ರಗಳನ್ನು ಹಿಡಿದು ಎಲ್ಲಾ ಪ್ರಾಣಿಗಳಿಗೆ ಸ್ವಾತಂತ್ರ್ಯವನ್ನು ಕೋರಿದರು.

ಹೈನುಗಾರಿಕೆ ತಾಯ್ತನವನ್ನು ಹಾಳುಮಾಡುತ್ತದೆ, ಮಾಂಸವೇ ಕೊಲೆ ಎಂಬ ಬರಹಗಳಿರುವ ಫಲಕಗಳನ್ನು ಹಿಡಿದು ಹಲವು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅವರು ಪ್ರಾಣಿಗಳು ನಮ್ಮಂತೆಯೇ ಸ್ವಾತಂತ್ರ್ಯಕ್ಕೆ ಅರ್ಹವಾಗಿವೆ ಎಂದು ಘೋಷಣೆ ಕೂಗಿದರು.

ಇದೇ ವೇಳೆ ಕಾರ್ಯಕರ್ತ ನಿತಿನ್ ಜೈನ್ ಸಣ್ಣ ಸ್ಥಳಗಳಲ್ಲಿ ಸೀಮಿತವಾಗಿರುವ ಪ್ರಾಣಿಗಳೊಂದಿಗೆ ಸಹಾನುಭೂತಿ ತೋರಿಸಬೇಕೆಂದು ಸ್ವತಃ ಪಂಜರದಲ್ಲಿ ಕುಳಿತುಕೊಂಡು ಗಮನ ಸೆಳೆದರು.

ಡೈರಿ, ಪೌಲ್ಟ್ರಿ ಮತ್ತು ಹೆಚ್ಚಿನ ಕೈಗಾರಿಕೆಗಳಲ್ಲಿ ಪ್ರಾಣಿಗಳೊಂದಿಗೆ ನಡೆದುಕೊಳ್ಳುವ ಕ್ರೂರ ವರ್ತನೆ ಅಂದರೆ,
ಹಸುಗಳು ಮತ್ತು ಎಮ್ಮೆಗಳ ಕೃತಕ ಗರ್ಭಧಾರಣೆ, ಡೈರಿ ಫಾರ್ಮ್ ಗಳಲ್ಲಿ ತಾಯಂದಿರಿಂದ ಕರುಗಳನ್ನು ಬೇರ್ಪಡಿಸುವುದು ಮತ್ತು ಗಂಡು ಮರಿ ಕೋಳಿಗಳನ್ನು ಪುಡಿಮಾಡುವ ದೃಶ್ಯಗಳನ್ನು ತೋರಿಸಿ ಬೇಸರ ವ್ಯಕ್ತಪಡಿಸಿದರು.

ಪ್ರಾಣಿಗಳ ಶೋಷಣೆ ಮಾಡುವುದನ್ನು ಬಿಟ್ಟು ಅವುಗಳ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಾರ್ಯಕರ್ತ ಅನುರಾಗ್ ತಿಳಿಸಿದರು.

ಹೋರಾಟಗಾರ ಸುನಿಲ್ ಮಾತನಾಡಿ ಯಾವ ಪ್ರಾಣಿಗಳಿಗೇ ಆಗಲಿ ಬದುಕುವ ಹಕ್ಕಿದೆ,ನಾವು ಸಸ್ಯ-ಆಧಾರಿತ ಆಹಾರದಲ್ಲಿ ಅಭಿವೃದ್ಧಿ ಹೊಂದಬಹುದು ಎಂದು ಅಭಿಪ್ರಾಯ ಪಟ್ಟರು.


Share this with Friends

Related Post