Sat. Nov 2nd, 2024

ತಾ.ಪಂ.ಮಾಜಿ ಸದಸ್ಯೆ ನಿವೇಶಕ್ಕೆ ನುಗ್ಗಿ ಕಟ್ಟಡ‌ ಧ್ವಂಸ

Share this with Friends

ಮೈಸೂರು,ಆ.12: ಮೈಸೂರು ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆಗೆ ಸೇರಿದ ನಿವೇಶನಕ್ಕೆ ಮೂರು ‌ಮಂದಿ
ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ಮಾಡಿದ್ದಾರೆ.

ಜೆಸಿಬಿ ತಂದು ಕಟ್ಟಡವನ್ನ ಧ್ವಂಸಗೊಳಿಸಿದ್ದು,ಈ ವೇಳೆ ವಿರೋಧಿಸಿದ ಮಾಜಿ ಸದಸ್ಯೆ ಪುತ್ರನನ್ನ ಎಳೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಈ‌ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.

ಮೈಸೂರಿನ ಹೊರವಲಯದ ಹಿನಕಲ್ ಬಳಿ ಇರುವ ನಿವೇಶನದ ಸಂಖ್ಯೆ 2403 ಬಿ 3 ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಚಿಕ್ಕತಾಯಮ್ಮ ಎಂಬುವರಿಗೆ ಸೇರಿದೆ.

ಜಿ.ಡಬ್ಲೂ.ಎಸ್.ನಿವೇಶನದಲ್ಲಿ ಚಿಕ್ಕತಾಯಮ್ಮ ಕಟ್ಟಡ ನಿರ್ಮಿಸಿದ್ದಾರೆ,ಆದರೆ ಏಕಾಏಕಿ ನಿವೇಶನಕ್ಕೆ ನುಗ್ಗಿದ ಮೂವರು ಜೆಸಿಬಿಯಿಂದ ಕಟ್ಟಡ ಕೆಡವಲು ಮುಂದಾಗಿದ್ದಾರೆ.

ಆಗ ಅಲ್ಲೇ ಇದ್ದ ಚಿಕ್ಕತಾಯಮ್ಮ ಅವರ ಪುತ್ರ ರಾಮ್ ಪ್ರೀತಂ ವಿರೋಧಿಸಿ ದ್ದಾರೆ,ಆದರೆ ಅವರನ್ನು ಬಲವಂತವಾಗಿ ಎಳೆದೊಯ್ದು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ.

ಈ ಎಲ್ಲಾ ಘಟನೆ ಸಿಸಿ ಕ್ಯಾಮರಾದಲ್ಲಿ ಹಾಗೂ ಮೊಬೈಲ್ ನಲ್ಲಿ ಸೆರೆಯಾಗಿದೆ.

ಬಲವಂತವಾಗಿ ತಮ್ಮ ಮಗನನ್ನ ಎಳೆದೊಯ್ದು ಹಲ್ಲೆ ನಡೆಸಿದ ಮೂವರ ವಿರುದ್ದ ಕ್ರಮ ಕೈಗೊಳ್ಳುವಂತೆ ಚಿಕ್ಕತಾಯಮ್ಮ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


Share this with Friends

Related Post