Wed. Dec 25th, 2024

ಗೀತಧಾರೆ ಕಾರ್ಯಕ್ರಮಕ್ಕೆ 40 ಗಾಯಕರ ಅಯ್ಕೆ

Share this with Friends

ಮೈಸೂರು, ಆ.12: ಮೈಸೂರು ದಸರಾ ವಸ್ತುಪ್ರದರ್ಶನದ ಕರ್ನಾಟಕ 50ರ ಸಂಭ್ರಮ ಸಾಂಸ್ಕೃತಿಕ ವೇದಿಕೆಯಲ್ಲಿ ಆಗಸ್ಟ್ 17 ಮತ್ತು 18ರಂದು ನಡೆಯಲಿರುವ ಗೀತಧಾರೆ ಕಾರ್ಯಕ್ರಮಕ್ಕೆ 40 ಗಾಯಕರನ್ನು ಅಯ್ಕೆ ಮಾಡಲಾಗಿದೆ.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಘಟಕದ ಅಧ್ಯಕ್ಷ ಡಾ. ನಾಗರಾಜ್ ವಿ ಭೈರಿ ರವರ ನೇತೃತ್ವದಲ್ಲಿ ಆಯೋಜಿಸಿರುವ ಗೀತಧಾರೆ ಸುಗಮಸಂಗೀತ ಕಾರ್ಯಕ್ರಮಕ್ಕೆ ಹಾಡುಗಾರರ ಆಯ್ಕೆಯ ಆಡಿಷನ್ ನಡೆಯಿತು.

ಆಡಿಷನ್ ನಲ್ಲಿ 80 ಹವ್ಯಾಸಿ ಗಾಯಕರು ಭಾಗವಹಿಸಿದ್ದರು,ಅವರಲ್ಲಿ 40 ಗಾಯಕರನ್ನು ಅಯ್ಕೆ ಮಾಡಲಾಯಿತು‌.

ಕವಿಗಳಾದ ಜಯಪ್ಪ ಹೊನ್ನಾಳಿ, ಉಪಾಧ್ಯಕ್ಷರಾದ ಗಂಗಾಧರಪ್ಪ, ಕಾರ್ಯದರ್ಶಿ ಸಿರಿಬಾಲು, ಪಿ.ಆರ್.ಒ ಬೆಟ್ಟೆಗೌಡ, ತೀರ್ಪುಗಾರರಾಗಿ ಇಂದ್ರಾಣಿ ಅನಂತರಾಮ್, ಡೇವಿಡ್, ರಶ್ಮಿ ಚಿಕ್ಕಮಗಳೂರು, ಎ.ಡಿ.ಶ್ರೀನಿವಾಸ್, ರಾಜೇಶ್ ಪಡಿಯಾರ್, ಸಂಗೀತ ಪಕ್ಕವಾದ್ಯದಲ್ಲಿ ತಬಲವಾದಕರಾದ ಇಂಧೂ ಶೇಖರ್, ಕೀಬೋರ್ಡ್ ವಾದಕರಾದ ಗಣೇಶ್ ಭಟ್, ರಿದಂ‌ಪ್ಯಾಡ್ ನಲ್ಲಿ ಕಿರಣ್, ನಿರೂಪಕ ಅಜಯ್ ಶಾಸ್ತ್ರಿ ಭಾಗವಹಿಸಿದ್ದರು.


Share this with Friends

Related Post