ಮೈಸೂರು, ಆ.13: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದೌರ್ಜನ್ಯ ಹಾಗೂ ದಾಳಿ ನಡೆಯುತ್ತಿದೆ,ಅಲ್ಲಿನ ಹಂಗಾಮಿ ಸರಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಆಗ್ರಹಿಸಿದ್ದಾರೆ
ಬಾಂಗ್ಲಾದಲ್ಲಿ ಮೀಸಲು ವಿಚಾರದಲ್ಲಿ ನಾಗರಿಕರು ದಂಗೆ ಎದ್ದ ಬಳಿಕ ಅಲ್ಲಿನ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದಿರುವುದರಿಂದ ಕಾನೂನು ಸುವ್ಯವಸ್ಥೆ ನಿಷ್ಕ್ರಿಯವಾಗಿದೆ.
ಕೆಲವರು ಗಲಭೆ ತೀವ್ರಗೊಳಿಸಲು ಹಿಂದೂ ಧಾರ್ಮಿಕ ಸ್ಥಳಗಳು, ದೇವಾಲಯಗಳು, ರುದ್ರಭೂಮಿ ಮೇಲೆ ದಾಳಿ ನಡೆಸುತ್ತಿದ್ದು ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ ಆತಂಕ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ರಕ್ಷಣೆಗೆ ವಿಶ್ವಸಂಸ್ಥೆ ಮುಂದಾಗಬೇಕು, ಅಲ್ಲಿನ ಪರಿಸ್ಥಿತಿ ಯಿಂದಾಗಿ ಬಾಂಗ್ಲಾ ನುಸುಳುಕೋರರು ನಮ್ಮ ದೇಶದ ಗಡಿ ಪ್ರವೇಶಿಸುವ ಸಾಧ್ಯತೆ ಇದ್ದು, ಭದ್ರತಾ ಪಡೆಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಹೇಮಾ ನಂದೀಶ್ ಒತ್ತಾಯಿಸಿದ್ದಾರೆ.