Mon. Dec 23rd, 2024

ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದವರಿಗೆ ಶಾಕ್ ನೀಡಿದ ತಹಸೀಲ್ದಾರ್

Share this with Friends

ಮೈಸೂರು,ಆ.14: ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಭೂಮಿ ಕಬಳಿಸಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದ ಭೂಗಳ್ಳರಿಗೆ ತಾಲೂಕು ಆಡಳಿತ ಶಾಕ್ ನೀಡಿದೆ.

ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಒತ್ತುವರಿ ಕಾರ್ಯಾಚರಣೆ ನಡೆದಿದ್ದು,ಸುಮಾರು ಒಂದು ಎಕರೆ ಭೂಮಿ ವಶಪಡಿಸಿಕೊಂಡು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಯಿತು.

ಮೈಸೂರು ತಾಲೂಕು ಕಸಬಾ ಹೋಬಳಿ ಮಂಡಕಳ್ಳಿ ಗ್ರಾಮದ ಸರ್ವೆ ನಂಬರ್ 250 ರ ಸರ್ಕಾರಿ ಬಂಜರು ಜಾಗದಲ್ಲಿ 1 ಎಕರೆ ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿ ಬೇಲಿ ಹಾಕಿದ್ದರು.

ದಾಖಲೆಗಳನ್ನ ಪರಿಶೀಲಿಸಿದ ತಹಸೀಲ್ದಾರ್ ಮಹೇಶ್ ಕುಮಾರ್ ಒತ್ತುವರಿಯನ್ನು ಖಚಿತಪಡಿಸಿಕೊಂಡು ಭೂಗಳ್ಳರಿಗೆ ಶಾಕ್ ಕೊಟ್ಟರು.

ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗು, ಕಸಬಾ ಹೋಬಳಿ ರಾಜಸ್ವನಿರೀಕ್ಷಕ ಬಿ.ಹೇಮಂತ್ ಕುಮಾರ್, ಮಂಡಕಳ್ಳಿ ಗ್ರಾಮದ ಆಡಳಿತಾಧಿಕಾರಿ ರಂಜಿತ, ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಗ್ರಾಮಸ್ತರಾದ ವೀರಭದ್ರಪ್ಪನವರ ಸಮ್ಮುಖದಲ್ಲಿ ಖಾಸಗಿ ವ್ಯಕ್ತಿ ನಿರ್ಮಿಸಿದ್ದ ಕಾಂಪೌಂಡನ್ನು ತೇರವುಗೊಳಿಸಿ ವಶಕ್ಕೆ ಪಡೆಯಲಾಯಿತು.


Share this with Friends

Related Post