Mon. Dec 23rd, 2024

ಹುಲ್ಲಹಳ್ಳಿ ಗ್ರಾಮದಲ್ಲಿ ಪೌರಕಾರ್ಮಿಕರಬವಣೆ ಕೇಳುವವರೇ ಇಲ್ಲ

Share this with Friends

ಮೈಸೂರು,ಆ.14: ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಪೌರಕಾರ್ಮಿಕರ ಬದುಕು ನಿಜಕ್ಕೂ ಶೋಚನೀಯ,ಇವರ ಬವಣೆ‌ ಕೇಳುವವರೇ ಇಲ್ಲದಂತಾಗಿದೆ.

ಪಟ್ಟಣಗಳನ್ನು ಸ್ವಚ್ಛಪಡಿಸುವ ಈ ಪೌರಕಾರ್ಮಿಕರಿಗೇ ಸ್ವಚ್ಛ ಬದುಕು ಇಲ್ಲದಂತಾಗಿದೆ.

ಶಿಥಿಲ ಗೋಡೆಗಳು,ಹರುಕು ಮುರುಕು ಬಟ್ಟೆಗಳೇ ಇವರಿಗೆ ಮೇಲ್ಛಾವಣಿಯಾಗಿದೆ,ಇನ್ನು
ಶೌಚಾಲಯ ವ್ಯವಸ್ಥೆ ಇಲ್ಲವೇ ಇಲ್ಲ ಬಯಲಲ್ಲೇ ಎಲ್ಲಾ.

ಗೋಡೆಗಳು ಜೋರು ಮಳೆಗೆ ಈಗಲೋ,ಆಗಲೋ ಕುಸಿಯುವಂತದೆ. ಮಳೆ ಬಂದಾಗ ಈ ಜನರಿಗೆ ಸರ್ಕಾರಿ ಕಚೇರಿ ಆವರಣವೇ ಗತಿ.

ಸುಮಾರು 35 ಕುಟುಂಬಗಳು ತಲತಲಾಂತರದಿಂದ ಇಲ್ಲೇ ನೆಲೆಸಿದ್ದು ಇವರಿಗೆ ನಾಗರೀಕ ಸೌಲಭ್ಯಗಳು ಮರೀಚಿಕೆಯಾಗಿದೆ.

ಸ್ವಂತ ಸೂರು ಪಡೆಯಲು ಸತತ ಹೋರಾಟ ನಡೆಸುತ್ತಿದ್ದರೂ ಇವರಿಗೆ ಇನ್ನೂ ನ್ಯಾಯ ದೊರೆತಿಲ್ಲ.

ಚುನಾವಣೆಗಳು ಬಂದಾಗ ಮತ ಕೇಳಲು ಇವರ ಮನೆಗಳಿಗೆ ಧಾವಿಸುವ ಜನಪ್ರತಿನಿಧಿಗಳು ನಂತರ ಇತ್ತ ತಿರುಗಿ ನೋಡುವುದೇ ಇಲ್ಲ ಎಂದು ತೀವ್ರ ಅಸಮಾಧಾನ ಪಡುತ್ತಾರೆ ಪೌರ ಕಾರ್ಮಿಕರು.

ಅಧಿಕಾರಿಗಳಿಗಂತೂ ನಮ್ಮ ಬವಣೆ ಅರ್ಥವಾಗುತ್ತಿಲ್ಲ ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ನಮ್ಮ ಬಗ್ಗೆ ಸರ್ಕಾರವಾಗಲೀ ಜಿಲ್ಲಾಡಳಿತ, ತಾಲೋಕು ಆಡಳಿತವಾಗಲಿ ತಲೆ ಕೆಡಿಸಿಕೊಂಡಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಶಿಥಿಲವಾದ ಗೋಡೆ‌ ಕುಸಿದು ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ.


Share this with Friends

Related Post