Mon. Dec 23rd, 2024

20 ಪೊಲೀಸ್‌ ಅಧಿಕಾರಿಗಳು ರಾಷ್ಟ್ರಪತಿಗಳ ಪದಕಕ್ಕೆ ಭಾಜನ

Share this with Friends

ಬೆಂಗಳೂರು,ಆ.14: 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೇಂದ್ರ ಗೃಹ ಸಚಿವಾಲಯ ನೀಡುವ ವಿಶಿಷ್ಟ ಸೇವಾ ಪದಕ ಮತ್ತು ಸಾರ್ಥಕ ಸೇವಾ ಪದಕಕ್ಕೆ ರಾಜ್ಯದ 20 ಪೊಲೀಸ್‌ ಅಧಿಕಾರಿಗಳು ಭಾಜನರಾಗಿದ್ದಾರೆ.

ರಾಜ್ಯದ 20 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಒಲಿದಿದೆ. ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಪ್ರಕಟವಾಗಿದೆ.

ಐಎಸ್‌ಡಿ, ಎಡಿಜಿಪಿ ಎಂ. ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಸೀನಿಯರ್ ಕಮಾಂಡರ್ ಬಸವಲಿಂಗಪ್ಪ ಅವರು ಅತ್ಯುತ್ತಮ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ, ಕೇಂದ್ರ ಗೃಹ ಸಚಿವಾಲಯ ಪದಕ ಘೋಷಣೆ ಮಾಡಿದ್ದು, ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಮಾಡಲಾಗುತ್ತದೆ.

ಶ್ರೀನಾಥ್ ಎಂ ಜೋಷಿ, ಎಸ್‌ಪಿ ಲೋಕಾಯುಕ್ತ,.
ಸಿ.ಕೆ ಬಾಬಾ, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ,ರಾಮಗೊಂಡ ಬೈರಪ್ಪ, ಎಎಸ್‌ಪಿ ಕರ್ನಾಟಕ,
ಗಿರಿ ಕೃಷ್ಣಮೂರ್ತಿ, ಡಿಎಸ್‌ಪಿ.,
ಪಿ ಮುರಳೀಧರ್, ಡಿಎಸ್‌ಪಿ.,
ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್.,
ಬಸವರಾಜು ಕಮ್ತಾನೆ, ಡಿಎಸ್‌ಪಿ.,
ರವೀಶ್ ನಾಯಕ್, ಎಸಿಪಿ.,
ಶರತ್ ದಾಸನಗೌಡ, ಎಸ್‌ಪಿ.,
ಪ್ರಭಾಕರ್ ಗೋವಿಂದಪ್ಪ, ಎಸಿಪಿ.,
ಗೋಪಾಲ್ ರೆಡ್ಡಿ, ಡಿಸಿಪಿ.,
ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್.,
ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್.,
ಹರೀಶ್ ಎಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್.,ಎಸ್ ಮಂಜುನಾಥ, ಇನ್ಸ್‌ಪೆಕ್ಟರ್ ಹಾಗೂ
ಗೌರಮ್ಮ ಜಿ., ಎಎಸ್ಐ. ಇವರುಗಳಿಗೆ ರಾಷ್ಟ್ರಪತಿಗಳ ಪದಕ ಸಿಗಲಿದೆ.


Share this with Friends

Related Post