Fri. Nov 1st, 2024

ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಅಕ್ರಮ ಕಟ್ಟಡ ತೆರವು

Share this with Friends

ಮೈಸೂರು, ಫೆ.18: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.

ಮೈಸೂರಿನ ನಜರ್ಬಾದ್ ನಲ್ಲಿರುವ ಮಿನಿ ವಿಧಾನಸೌಧ ಹಿಂಭಾಗದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ತಲೆಯುತ್ತಿದ್ದ ಕೆಲ ಮಳಿಗೆಗಳನ್ನು ತೆರವುಗೊಳಿಸಲಾಯಿತು

ಹಲವು ವರ್ಷಗಳಿಂದ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು.

ಒಂದೇ ಸೂರಿನಡಿ ಐದು ಮಳಿಗೆಗಳನ್ನು ನಿರ್ಮಿಸಿ ಅದನ್ನು ಪತ್ರ ಬರಹಗಾರರ ಕಚೇರಿ, ಜೆರಾಕ್ಸ್ ಅಂಗಡಿ ಸೇರಿದಂತೆ ಕೆಲ ವಾಣಿಜ್ಯ ಚಟುವಟಿಕೆಗಳಿಗೆ ಬಾಡಿಗೆ ನೀಡಲಾಗಿತ್ತು.

ಈ ಅಕ್ರಮ ಕಟ್ಟಡಕ್ಕೆ ಚೆಸ್ಕಾಂನಿಂದ ವಿದ್ಯುತ್ ಸಂಪರ್ಕ ಸಹ ನೀಡಲಾಗಿತ್ತು.

ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೂ ಯಾವೊಬ್ಬ ಅಧಿಕಾರಿಯೂ ಸಹ ಈ ಬಗ್ಗೆ ಗಮನ ಹರಿಸದೆ ಹೋಗಿರುವುದು ಹಕವು ಅನುಮಾನಗಳಿಗೆ ಎಡೆ ಮಾಡಿದೆ.

ಮಹೇಶ್ ಕುಮಾರ್ ಅವರು ತಹಸಿಲ್ದಾರ್ ಆಗಿ ಬಂದ ನಂತರ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರ ಭದ್ರತೆಯಲ್ಲಿ ಈ ಅಕ್ರಮ ಮಳಿಗೆಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಿದರು.

ಮತ್ತೊಂದು ವಿಶೇಷ ಎಂದರೆ ತಹಸಿಲ್ದಾರ್ ಕಚೇರಿ, ಲೋಕೋಪಯೋಗಿ ಇಲಾಖೆ, ಭೂಮಾಪನಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳ ಮಧ್ಯದಲ್ಲಿಯೇ ಹಲವಾರು ವರ್ಷಗಳಿಂದ ಈ ಅಕ್ರಮ ಕಟ್ಟಡ ನಿರಾತಂಕವಾಗಿ ನಡೆಯುತ್ತಿದ್ದವು.

ಮಳಿಗೆಯವರಿಗೆ ಖಾಲಿ ಮಾಡಲು ತಿಳಿಸಿದರೂ ಅವರು ಖಾಲಿ ಮಾಡಿರಲಿಲ್ಲ,ಹಾಗಾಗಿ ಕಾರ್ಯಾಚರಣೆ ನಡೆಸಿ ತೆರವು ಮಾಡಬೇಕಾಯಿತು ಎಂದು ತಹಸಿಲ್ದಾರ್ ಮಹೇಶ್ ಕುಮಾರ್ ತಿಳಿಸಿದ್ದಾರೆ.

ಅಕ್ರಮ ಕಟ್ಟಡ ತೆರವು ಗೊಳಿಸಿದ ವೇಳೆ ರೆವಿನ್ಯೂ ಇನ್ಸ್ಪೆಕ್ಟರ್ ರಾಘವೇಂದ್ರ ನಾಯಕ್, ಗ್ರಾಮ ಆಡಳಿತ ಅಧಿಕಾರಿ ಮಹೇಶ್, ನಾಗೇಶ್ ಕುಮಾರ್, ಅಜೀಮ್ ಖಾನ್, ಸರ್ವೇ ಸೂಪರ್ ವೈರಸ್ ಸುರೇಶ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.


Share this with Friends

Related Post