ಮೈಸೂರು, ಆ.14: ಸಂಗೀತ ಆಲಿಸುವದರಿಂದ ಮನಸ್ಸಿಗೆ ನೆಮ್ಮದಿ, ಸಮಾಧಾನ ಸಿಗಲಿದೆ ಎಂದು ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಹೇಳಿದರು.
ಸಂಗೀತ ಮನಸ್ಸಿಗೆ ಮುದ ನೀಡುವುದಲ್ಲದೆ ದೇಹದಲ್ಲಿ ಚೈತನ್ಯ ತುಂಬುತ್ತದೆ ಹಾಗಾಗಿ ಮನುಷ್ಯ ಬೇಸರವಾದಾಗ ಸಂಗೀತ ಆಲಿಸುತ್ತಾನೆ ಎಂದು ತಿಳಿಸಿದರು.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ಮೊದಲ ವರ್ಷದ ಹೆಜ್ಜೆ ಅಂಗವಾಗಿ ಹಿರಿಯ ಸಂಗೀತ ನಿರ್ದೇಶಕರುಗಳ ಸವಿನೆನಪಿಗಾಗಿ ಏರ್ಪಡಿಸಿದ್ದ ಸಂಗೀತ ಸೌರಭ ಅಲೆಯ ಚಿತ್ರಗೀತೆಗಳ ಸಂಗೀತ ಕಾರ್ಯಕ್ರಮದಲ್ಲಿ ರಾಜೀವ್ ಮಾತನಾಡಿದರು.
ಹಿರಿಯ ಕಲಾವಿದರು ಹಾಗೂ ಸಂಗೀತಗಾರರಾದ ಹೆಸರಾಂತ ಚಲನಚಿತ್ರ ಹಿನ್ನೆಲೆ ಗಾಯಕಿ ಮಾನಸ ಹೊಳ್ಳ. ರವಿ ಸಂತು ರಾಮದಾಸ್. ಉಮ್ಮತ್ತೂರು ಚಂದ್ರು ಸುರೇಶ್ ಗೌಡ್ರು. ಗೋಪಾಲ್ ರಾಜ್. ಪದ್ಮ .ಕಿರಣ್ .ಶ್ರೀಕುಮಾರ್ ಸುಧಾಕರ .ಸುಮಿತ್ರ ಲೋಕೇಶ್.ಶ್ರೀಕಂಠ ಅವರುಗಳನ್ನು ಸನ್ಮಾನಿಸಲಾಯಿತು.
ಸಂಗೀತ ಆಲಿಸದ ಅಥವಾ ಹಾಡು ಕೇಳದೆ ಬಹು ದೂರ ಇರುವ ಸಂಗೀತ ಅಂದರೆ ಇಷ್ಟ ಪಡದ ಯಾರಾದರೂ ಜಗತ್ತಿನಲ್ಲಿ ಸಿಗಲು ಸಾಧ್ಯವಿಲ್ಲ, ಪ್ರಸ್ತುತ ತಾಂತ್ರಿಕವಾಗಿ ಬಳಷ್ಟು ಮುಂದುವರೆದಿರುವದರಿಂದ ರೇಡಿಯೋ, ಟೇಪ್ ಅಧ್ಯಾಯ ಮುಗಿದು ಈಗ ಕೈಯಲ್ಲಿರುವ ಮೊಬೈಲ್ ಸಾಧನ ಮೂಲಕವೇ ಸುಲಭವಾಗಿ ಬೇಕಾದ ಸಂಗೀತ, ಹಾಡು ಇವೆಲ್ಲವನ್ನು ಆಸ್ವಾಧಿಸಬಹುದು ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ ಪ್ರಕಾಶ್ ಮಾತನಾಡಿ, ಸಂಗೀತ ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ, ಅದು ರೋಗಿಗಳ ಆರೋಗ್ಯ ಸುಧಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ, ನರಸಂಬಂಧಿ ಸಮಸ್ಯೆಗಳು ಹಾಗೂ ಮೆದುಳಿನ ಸಮಸ್ಯೆಗಳಿಗೆ ಸಂಗೀತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಹೆಸರಾಂತ ಚಲನಚಿತ್ರ ಹಿನ್ನೆಲೆ ಗಾಯಕಿ ಮಾನಸ ಹೊಳ್ಳ, ರವಿ, ಸಂತು, ರಾಮದಾಸ್, ಉಮ್ಮತ್ತೂರು ಚಂದ್ರು, ಸುರೇಶ್ ಗೌಡ್ರು, ಗೋಪಾಲ್ ರಾಜ್, ಪದ್ಮ, ಕಿರಣ್, ಶ್ರೀಕುಮಾರ್, ಸುಧಾಕರ,ಸುಮಿತ್ರ, ಲೋಕೇಶ್,ಶ್ರೀಕಂಠ ಅವರುಗಳನ್ನು ಸನ್ಮಾನಿಸಲಾಯಿತು.
ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್,
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಶಾಸ್ತ್ರಿ, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ವೈದ್ಯರಾದ ಡಾ. ಲಕ್ಷ್ಮಿ, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾಗಶ್ರೀ ಸುಚಿಂದ್ರ, ಸುಚಿಂದ್ರ, ಚಕ್ರಪಾಣಿ, ರಂಗನಾಥ್, ಮಿರ್ಲೆ ಶ್ರೀನಿವಾಸ್, ರೂಪ ,ರೇಖಾ ಮತ್ತಿತರರು ಹಾಜರಿದ್ದರು.