ಮೈಸೂರು, ಆ.14: ನಗರದ ಚಾಮರಾಜಪುರಂನಲ್ಲಿರುವ ಕೃಷ್ಣರಾಜ ಯುವ ಬಳಗದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯ ಹಮ್ಮಿಕೊಳ್ಳಲಾಯಿತು.
ಈ ವೇಳೆ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಿ ಮಾತನಾಡಿದ
ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ಮಂಚೆಗೌಡನ ಕೊಪ್ಪಲು ರವಿ ಅವರು
ರಾಯಣ್ಣನ ದೇಶಪ್ರೇಮ ಯುವಜನರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಬ್ರಿಟೀಷರ ಕುಟಿಲ ನೀತಿಯ ವಿರುದ್ಧ ಯುವ ಸೇನೆ ಕಟ್ಟಿ ಹೋರಾಡಿ, ಪ್ರಾಣವನ್ನೇ ಬಲಿಕೊಟ್ಟ ರಾಯಣ್ಣನ ಜನ್ಮದಿನ ಆಚರಿಸುವುದು ಅವಶ್ಯಕ.
ತ್ಯಾಗ, ಬಲಿದಾನಕ್ಕೆ ಮತ್ತೊಂದು ಹೆಸರೇ ರಾಯಣ್ಣ ಇಂತಹ ಮಹನೀಯರ ಬಗ್ಗೆ ಯುವ ಜನಾಂಗ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿ ಸಂಗೊಳ್ಳಿ ರಾಯಣ್ಣ ಸಮುದಾಯದ ಎಲ್ಲ ವರ್ಗಗಳ ಜನರನ್ನು ಒಟ್ಟುಗೂಡಿಸಿ, ಯುವಸೈನ್ಯ ಕಟ್ಟಿ ಬ್ರಿಟೀಷರ ವಿರುದ್ಧ ರಣ ಕಹಳೆಯನ್ನೂದಿದ ವೀರಯೋಧ ಎಂದು ತಿಳಿಸಿದರು.
ವಿದ್ಯಾರ್ಥಿಗಳು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು,
ದೇಶದ ಶಕ್ತಿಯಾದ ವಿದ್ಯಾರ್ಥಿಗಳು ದೇಶಸೇವೆ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು
ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ವಿನೋದ್ ರಾಜ್, ಅಹಿಂದ ಮುಖಂಡ ಲೋಕೇಶ್ ಕುಮಾರ್, ಜೆಡಿಎಸ್ ಕಾರ್ಯದಕ್ಷರಾದ ಪ್ರಕಾಶ್ ಪ್ರಿಯದರ್ಶನ್, ವರುಣ ಶಿವಕುಮಾರ್, ಎಸ್. ಎನ್ ರಾಜೇಶ್, ರವಿಚಂದ್ರ,ದುರ್ಗಾ ಪ್ರಸಾದ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು, ರಾಜೇಂದ್ರ, ನಿವೃತ್ತ ಶಿಕ್ಷಕ ಮಹದೇವಸ್ವಾಮಿ, ಚಕ್ರಪಾಣಿ ಮತ್ತಿತರರು ಹಾಜರಿದ್ದರು.