Mon. Dec 23rd, 2024

ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಕೆ:ಸಿಎಂಗೆ ಅಭಿನಂದನೆ

Share this with Friends

ಚಿಕ್ಕಮಗಳೂರು, ಫೆ.18: ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ‌ ಅವರಿಗೆ ಬಸವ ಕೇಂದ್ರದವರು ಅಭಿನಂದನೆ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ, ನರಸಿಂಹರಾಜಪುರದ ಮೆಣಸೂರು ಬಸವಕೇಂದ್ರ ಮತ್ತು ಲಿಂಗಾಯತ ರಡ್ಡಿ ಬಂಧುಗಳು ಅಭಿನಂದನೆ‌ ಸಲ್ಲಿಸಿದ್ದಾರೆ.

ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಭಾವಚಿತ್ರದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಅಡಿ ಬರಹವಿರಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು.

ಅದರಂತೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲಾಗಿದೆ.

ಈ ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾರ್ಯವನ್ನು ನರಸಿಂಹರಾಜಪುರದ ಮೆಣಸೂರು ಬಸವಕೇಂದ್ರ ಮತ್ತು ಲಿಂಗಾಯತ ರಡ್ಡಿ ಬಂಧುಗಳು ಕೊಂಡಾಡಿದ್ದಾರೆ.

ಬಸವಕೇಂದ್ರದ ಪೂಜ್ಯಶ್ರಿ ಬಸವಯೋಗಿಪ್ರಭುಗಳು,
ಅಧ್ಯಕ್ಷ ಶಾಂತರಾಜ್, ಸೊಮೇಶ್, ಸತೀಶ್, ನಾಗರಾಜು, ಕೀರ್ತಿ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.


Share this with Friends

Related Post