Mon. Dec 23rd, 2024

ಸದ್ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Share this with Friends

ಮೈಸೂರು, ಆ.15: ನಗರದ
ಬಸವನಗುಡಿಯಲ್ಲಿರುವ ಸದ್ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಯಿತು.

ಬಡಕೂಲಿ ಕಾರ್ಮಿಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಸದುದ್ದೇಶದಿಂದ ಜಯನಗರ 4ನೇ ಬಡಾವಣೆಯ ಬಸವನಗುಡಿಯಲ್ಲಿ ಸದ್ವಿವೇಕ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಈ ಶಾಲೆಯನ್ನು ಪ್ರಾರಂಭಿಸಿದೆ.

ನಿಜವಾದ ಹೀರೋಗಳು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹೋರಾಟ, ಬಲಿದಾನ, ತ್ಯಾಗದಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು.

ಸದ್ವಿವೇಕ ಶಾಲೆಯ ಮುಖ್ಯಸ್ಥರಾದ ಮಂಜುನಾಥ್, ಶಾಲೆಯ ಟ್ರಸ್ಟಿಗಳಾದ ಸುಗುಣ, ಶಾಲೆಯ ಮುಖ್ಯೋಪಾಧ್ಯಾಯರಾದ ವಾಣಿ ಹಾಗೂ ಶಾಲಾ ಸಿಬ್ಬಂದಿ ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಉದ್ಯಮಿ ಮೋನಿಕಾ.ಎಂ ಪಾಲ್ಗೊಂಡಿದ್ದರು.


Share this with Friends

Related Post