Mon. Dec 23rd, 2024

ಸಾರ್ವಜನಿಕ ವಾಕಿಂಗ್ ಪಾಥ್, ಮಕ್ಕಳ ಆಟದ ಮೈದಾನ ಉದ್ಘಾಟನೆ

Share this with Friends

ಮೈಸೂರು,ಆ.16: ಬಿಡಾರಾಂ ಕೃಷ್ಣಪ್ಪ ರಸ್ತೆಯಲ್ಲಿರುವ ನಗರ ಪಾಲಿಕೆಯ ಖಾಲಿ ಜಾಗದಲ್ಲಿ ನಿರ್ಮಾಣವಾದ ವಾಕಿಂಗ್ ಪಾಥ್ ಮತ್ತು ಮಕ್ಕಳ ಆಟದ ಮೈದಾನವನ್ನು ಶಾಸಕ ಹರೀಶ್ ಗೌಡ ಉದ್ಘಾಟಿಸಿದರು.

ಇದಕ್ಕಾಗಿ 2023 -24ನೇ ಸಾಲಿನಲ್ಲಿ ಅನುದಾನ‌ ಮಂಜೂರಾಗಿತ್ತು.ಉದ್ಘಾಟನೆ ವೇಳೆ ಮಾತನಾಡಿದ‌ ಹರೀಶ್‌‌ಗೌಡ, ನಾಗರಿಕರು ಈ ಉದ್ಯಾನವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಗರ ಪಾಲಿಕೆ ಮಾಜಿ ಸದಸ್ಯರಾದ ನಾಗಭೂಷಣ್, ಲೋಕೇಶ್ ರಾವ, ರಾಜೀವ್, ವಾರ್ಡ್ ಅಧ್ಯಕ್ಷರಾದ ಆನಂದ್, ಮಂಜುನಾಥ, ಮಂಜುಳಾ, ಜ್ಞಾನೇಶ್, ನವೀನ್, ಪವನ್, ಸಂಜಯ್, ರವಿಚಂದ್ರ, ಈರೇಗೌಡರು, ಶೇಖರ,ನಿತಿನ್ ಗುರುರಾಜ್, ಶ್ರೀಕಾಂತ್ ಪಾಪು, ಪೈಲ್ವಾನ್ ರಮೇಶ್, ಬಾಲರಾಜ್, ನಂಜುಂಡಸ್ವಾಮಿ, ರವಿ, ಮನು ಅಧಿಕಾರಿಗಳು ಹಾಜರಿದ್ದರು.


Share this with Friends

Related Post