Sun. Dec 22nd, 2024

ಇಸ್ರೋ ದಿಂದ ಭೂಮಿ ಪರಿವೀಕ್ಷಣಾ ಇಒಎಸ್‌-08 ಉಪಗ್ರಹ ಯಶಸ್ವಿಉಡಾವಣೆ

Share this with Friends

ಶ್ರೀಹರಿಕೋಟ,ಆ.16: ಭೂಮಿ ಪರಿವೀಕ್ಷಣಾ ಇಒಎಸ್‌-08 ಉಪಗ್ರಹವನ್ನು ಇಸ್ರೋ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡ್ಡಯನ ಕೇಂದ್ರದಿಂದ ಚೆನ್ನೈನಿಂದ ಪೂರ್ವಕ್ಕೆ 135 ಕಿ.ಮೀ ದೂರದಲ್ಲಿ 9.17 ಕ್ಕೆ ಉಪಗ್ರಹ ಉಡಾವಣೆ ಮಾಡಲಾಗಿದ್ದು, ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್‌-08 ಹೊತ್ತಿದ್ದ ಕಿರು ಉಪಗ್ರಹ ಉಡಾವಣಾ ವಾಹನ-D3 ನಭಕ್ಕೆ ಚಿಮ್ಮಿತು.

ಈ ಮಿಷನ್‌ನ ಉದ್ದೇಶ ಮೈಕ್ರೋಸ್ಯಾಟಲೈಟ್ ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದಾಗಿದ್ದು, ಉಪಗ್ರಹವು ಉದ್ದೇಶಿತ ಕಕ್ಷೆ ಸೇರಿದೆ.

ಜೊತೆಗೆ ಭವಿಷ್ಯ ಉಪಗ್ರಹಗಳ ಕಾರ್ಯಾಚರಣೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂದು ಬೆಂಗಳೂರು ಪ್ರಧಾನ ಕಚೇರಿಯ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

EOS-08 ಉಪಗ್ರಹ ಎಲೆಕ್ಟ್ರೋ ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್ (EOIR), ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್-ರಿಫ್ಲೆಕ್ಟೋಮೆಟ್ರಿ ಪೇಲೋಡ್ (GNSS-R) ಮತ್ತು SiC UV ಡೋಸಿಮೀಟರ್ ಎಂಬ ಮೂರು ಪೇಲೋಡ್‌ಗಳನ್ನು ಹೊಂದಿದೆ.

EOIR ಪೇಲೋಡ್: ಮಿಡ್-ವೇವ್ IR (MIR) ಮತ್ತು ಲಾಂಗ್-ವೇವ್ IR (LWIR) ಬ್ಯಾಂಡ್‌ಗಳಲ್ಲಿ, ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆಗಾಗಿ ದಿನವಿಡೀ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಜ್ವಾಲಾಮುಖಿ ಕಾರ್ಯಾಚರಣೆ ಪತ್ತೆ, ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತು ಮೇಲ್ವಿಚಾರಣೆ ಸಹ ಮಾಡಲಿದೆ ಎಂದು ಸಂಸ್ಥೆ ಹೇಳಿದೆ.


Share this with Friends

Related Post