ಬೆಂಗಳೂರು : ಬಸವ ಸಾಹಿತ್ಯ ವೇದಿಕೆ ವತಿಯಿಂದ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಬೆಂಗಳೂರಿನ ನೆಲಮಂಗಲದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಹನುಮಂತಯ್ಯನವರು ಬಸವ ಸಾಹಿತ್ಯ ವೇದಿಕೆಯು ಸುಮಾರು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡುತ್ತಾ ಬಂದಿದೆ ರಾಜ್ಯದ ವಿವಿಧ ಮೂಲೆಗಳಲ್ಲಿ ಎಲೆ ಮರೆ ಕಾಯಿಯಂತೆ ಇರುವ ಕವಿಗಳನ್ನು, ಸಾಹಿತಿಗಳನ್ನು , ಕಲಾವಿದರನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ವೇದಿಕೆಯನ್ನು ಕಲ್ಪಿಸಿಕೊಂಡು ಬಂದಿದೆ ಆದ್ದರಿಂದ ಬಸವ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶಿವಪ್ರಸಾದ್ ರವರಿಗೆ ಹಾಗೂ ತಂಡದವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಹಿರಿಯ ಸಾಹಿತಿಗಳು ಹಾಗೂ ಪತ್ರಕರ್ತರಾದ ಮಣ್ಣಿ ಮೋಹನ್ ಮಾತನಾಡಿ ಭಾರತದ ಭವ್ಯ ಸಂಸ್ಕೃತಿ ಹಾಗೂ ಪರಂಪರೆಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಇದನ್ನು ಭಾರತದ ಪ್ರತಿಯೊಂದು ಮನೆಮನೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದನ್ನು ನಾವೆಲ್ಲರೂ ಮಾಡಲು ಮುಂದಾಗೋಣ ಎಂದರು ಹಾಗೂ ಸಾಹಿತ್ಯ ಹಾಗೂ ಸಾಹಿತಿಗಳು ಈ ಜಗದಲ್ಲಿ ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿರುತ್ತಾರೆಒಂದೇ ಮಾತರಂ ಬರೆದ ಬಂಕಿಮ ಚಂದ್ರ ಚಟರ್ಜಿ, ಜನಗಣಮನ ಬರೆದ ರವೀಂದ್ರ ನಾಥ ಠಾಗೋರ್ , ನಾಡಗೀತೆ ಬರೆದ ಕುವೆಂಪುರವರೆ ಇದಕ್ಕೆ ಸಾಕ್ಷಿ ಆದ್ದರಿಂದ ಸಾಹಿತ್ಯವನ್ನು ಮತ್ತೊಷ್ಟು ಬೆಳೆಸೋಣ ಎಂದರು.
ವಿಚಾರ ವೇದಿಕೆಯಲ್ಲಿ ಆಕಾಶ್ ಮಂಡ್ಯರವರು ಸಾಹಿತ್ಯದಲ್ಲಿ ನಾವೆಲ್ಲರೂ ಹೆಚ್ಚಿನದಾಗಿ ವೈಜ್ಞಾನಿಕವಾಗಿ ಸಾಹಿತ್ಯವನ್ನು ರಚಿಸಬೇಕು ಸಮಾಜದ ಬದಲಾವಣಿಯಲ್ಲಿ ವೈಜ್ಞಾನಿಕ ಸಾಹಿತ್ಯ ಹೆಚ್ಚಿನ ಪರಿಣಾಮ ಬೀರುತ್ತದೆ. ಕುವೆಂಪು, ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ ಗಮನಿಸಿ ವೈಜ್ಞಾನಿಕವಾಗಿ ಸಾಹಿತ್ಯ ರಚಿಸಿ ಜನಮನ್ನಣೆ ಪಡೆದಿದ್ದಾರೆ ಆದ್ದರಿಂದ ಈಗಿನ ಕವಿಗಳು ಮೂಢನಂಬಿಕೆಯನ್ನು ಮರೆತು ವೈಜ್ಞಾನಿಕವಾಗಿ ಸಾಹಿತ್ಯವನ್ನು ರಚಿಸಿ ಮುಂದಿನ ಪೀಳಿಗೆಗೆ ವೈಜ್ಞಾನಿಕ ಸಾಹಿತ್ಯ ನೀಡಬೇಕು ಎಂದರು ಹಾಗೆಯೇ ವೈಜ್ಞಾನಿಕವಾಗಿ ಚೀನಾ, ಜಪಾನ್, ಜರ್ಮನ್ ಅಮೇರಿಕಾ, ರಷ್ಯಾ ಈಗೇ ನಾನಾ ಯೋರೋಪಿನ ರಾಷ್ಟ್ರಗಳು ವೈಜ್ಞಾನಿಕತೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದಿದ್ದಾರೆ ಅದರಂತೆ ನಾವು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಹೊಂದಬೇಕು ಎಂದು ತಿಳಿಸಿದರು.
ವೀಣಾ.ವಿ. ಹಾಗೂ ಅಭಿಶ್ರೀ ರವರು ಕಾರ್ಯಕ್ರಮದ ಪ್ರಾರ್ಥನೆ ಮಾಡಿ ಜನಮನ್ನಣೆ ಪಡೆದರು ಹಾಗೂ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಡಾ.ವೆಂಕಟೇಶ್. ಆರ್.ಚೌತಾಯಿರವರು ಉತ್ತಮವಾಗಿ ನಿರೂಪಣೆ ಮಾಡಿದರು. ಉಪನ್ಯಾಸಕರಾದ ರೇಣುಕಾ ಪ್ರಸಾದ್ ರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಜಾಕವಿ ನಾಗರಾಜ್ ರವರು ಭಾಗವಹಿಸಿ ಉತ್ತಮ ಕವನ ನಾನು ಮಾಡಿದರು. ಹಾಡೋ ಯಶೋಧರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪನ್ಯಾಸಕರಾದ ಲಕ್ಷ್ಮೀದೇವಿ ಉತ್ತಮ ವಚನವನ್ನು ವಾಚನ ಮಾಡಿದರು ಹಾಗೆಯೇ ಸುಮಾ, ಅಂಜನ್ ದೊಡ್ಡ ಬಳ್ಳಾಪುರ, ಸಾಹಿತಿಗಳಾದ ಆನಂದ ಮೌರ್ಯ, ಮಲ್ಲೇಶ್, ಶಶಿಕುಮಾರ್ ಹಾಗೂ ರಾಜ್ಯದ ವಿವಿಧ ಕಡೆಯಿಂದ ಬಂದಂತಹ ಕವಿಗಳು ಉತ್ತಮವಾಗಿ ಕಾವ್ಯವಾಚನ ಮಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಯು ಅಧ್ಯಕ್ಷರಾದ ಗೋಪಾಲ್ ರವರು ಮಾತನಾಡಿ ಬಸವ ಸಾಹಿತ್ಯ ವೇದಿಕೆಯಲ್ಲಿ ಭಾಗವಹಿಸಿದ ಕವಿಗಳು ಉತ್ತಮವಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಕಾವ್ಯದ ಮೂಲಕ ವ್ಯಕ್ತಪಡಿಸಿದ್ದಾರೆ ಹಾಗೂ ವಿಚಾರಗೋಷ್ಠಿಯಲ್ಲಿ ಉತ್ತಮವಾದ ವಿಚಾರಗಳು ಬೆಳಕಿಗೆ ಬಂದವು ಆದ್ದರಿಂದ ವಿಚಾರಗಳು ಮತ್ತು ಸಾಹಿತ್ಯದ ಬೆಳವಣಿಗೆಗೆ ಬಸವ ಸಾಹಿತ್ಯ ವೇದಿಕೆ ಉತ್ತಮ ಕೆಲಸ ಮಾಡಿದೆ ಎಂದರು ಕಾರ್ಯಕ್ರಮದಲ್ಲಿ ಸೋಮ ಶೇಖರ್ , ಪ್ರಕಾಶ್ , ಕೇಶವಮೂರ್ತಿ , ಬೈಲಪ್ಪ, ಸಿರಾಜ್ ಅಹಮದ್, ಸುರೇಶ್ , ಹನುಮಂತಯ್ಯ , ಮಹಾಲಿಂಗಯ್ಯ ಹಾಗೂ ಮಹೇಶ್ ಬೆಂಗಳೂರು ಹಾಗೂ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು