Mon. Dec 23rd, 2024

ಶಿಕ್ಷಕರ, ವೈದ್ಯರ ಹಾಗೂ ಅಭಿಯಂತರರ ದಿನಾಚರಣೆ ಆಚರಿಸಿದ ಮೈಸೂರು ಲಯನ್ಸ್ ಸೆಂಟ್ರಲ್

Share this with Friends

ಮೈಸೂರು, ಸೆ.14 : ಇಲ್ಲಿನ ಸೆಂಟ್ರಲ್ ಲಯನ್ಸ್ ಸಂಸ್ಥೆಯು ಶಿಕ್ಷಕರ, ವೈದ್ಯರ ಹಾಗೂ ಅಭಿಯಂತರರ ದಿನಾಚರಣೆಯನ್ನು ಆಚರಿಸಿತು.

ಕಾರ್ಯಕ್ರಮದ ಪ್ರಯುಕ್ತ ಕುಂಬಾರ ಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಲೋಹಿತೇಶ್, ಕುಂಬಾರ ಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಶಿಕ್ಷಕ ಎಂ.ಅರುಣ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರ ಕೆ. ಜೆ. ಸಿಂಧು ಹಾಗೂ ಮೇಟಗಳ್ಳಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮೀನಾರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾಜಿ ಜಿಲ್ಲಾ ರಾಜ್ಯಪಾಲ ಲಯನ್ ಕೆ. ಮದೇವೇಗೌಡ ಹಾಗೂ ಜಿಲ್ಲಾ ಸಹ ಖಜಾಂಚಿ ಲಯನ್ ಎಂ. ಸಿದ್ದೇಗೌಡ, ಸಂಸ್ಥೆಯ ಅಧ್ಯಕ್ಷ ಲಯನ್ ಬಿ. ಎಸ್. ಪ್ರಸಾದ್, ಖಾಶಿಯಾ ಅಧ್ಯಕ್ಷ ಲಯನ್ ಕೆ. ಬಿ. ಲಿಂಗರಾಜುರವರು, ಕಾರ್ಯದರ್ಶಿ ಸುನೀಲ್, ಖಜಾಂಚಿ ಆರ್. ಸಿದ್ದೇಗೌಡ ಮತ್ತು ಸದಸ್ಯರು ಉಪಸ್ಥಿತರಿದ್ದರು.


Share this with Friends

Related Post