Mon. Dec 23rd, 2024

ಮುನಿರತ್ನ ರಾಜೀನಾಮೆಗೆ ಪುಷ್ಪ ಅಮರನಾಥ್ ಒತ್ತಾಯ

Share this with Friends

ಮೈಸೂರು: ಮುನಿರತ್ನ ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮುನಿರತ್ನ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ವರಿಸಿದರು.

ಶಾಸಕ ಮುನಿರತ್ನ ಅವರ ಆಡಿಯೋ ಅಸಹ್ಯವಾಗಿದೆ ಮಹಿಳೆಯರು, ದಲಿತರು ಅಂದರೆ ಏನೆಂದುಕೊಂಡಿದ್ದಾರೆ ಅವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರ ಮನಸ್ಥಿತಿ ಏನು ಅಂತ ಇಂತಹ ನಾಯಕರ ಮಾತಿನಿಂದ ವ್ಯಕ್ತವಾಗುತ್ತದೆ. ಈ ವಿಚಾರವಾಗಿ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಮುನಿರತ್ನ ಅವರ ರಾಜೀನಾಮೆ ಪಡೆದು ಪಕ್ಷದಿಂದ ವಜಾ ಮಾಡಬೇಕು. ತಾಕತ್ತು ದಮ್ಮುಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪುಷ್ಪ ಅಮರ್ ನಾಥ್ ಒತ್ತಾಯಿಸಿದರು.


Share this with Friends

Related Post