Mon. Dec 23rd, 2024

ಕೊಲೆ ಪ್ರಕರಣದ ತನಿಖೆ ಖುದ್ದು ಪರಿಶೀಲಿಸಲು ಎಸ್ ಪಿಗೆ ಸಿದ್ದು ಸೂಚನೆ

Share this with Friends

ಕಲಬುರಗಿ: ಆಗಸ್ಟ್ 22 ರಂದು ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದ್ದ ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣದ ತನಿಖೆಯನ್ನು ಖುದ್ದು ಪರಿಶೀಲಿಸುವಂತೆ ರಾಯಚೂರು ಎಸ್‌ಪಿ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆಗೆ ತೆರಳುವ ವೇಳೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ವೇಳೆ ಕೊಲೆಯಾದ ಸಂಜಯ್ ಪತ್ನಿ ಶಾಂತಮ್ಮ ಈ ಬಗ್ಗೆ ಸಿಎಂ ರಲ್ಲಿ ಮನವಿ ಮಾಡಿಕೊಂಡರು.

ಶಾಂತಮ್ಮ ಅವರ ನೋವಿಗೆ ಮರುಗಿದ ಸಿದ್ದು,ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ರಾಯಚೂರು ಎಸ್ ಪಿ ಅವರನ್ನು ಸಂಪರ್ಕಿಸಿ ಕೊಲೆ ಪ್ರಕರಣದ ವಿವರಣೆ ನೀಡುವಂತೆ ಸೂಚಿಸಿದರಲ್ಲದೆ ಖುದ್ದಾಗಿ ಪರಿಶೀಲಿಸುವಂತೆ ತಾಕೀತು ಮಾಡಿದರು.

ನಂತರ ಈ ಬಗ್ಗೆ ತಮಗೆ ವರದಿ ಪ್ರಕರಣದ ತನಿಖೆ ಏನಾಯಿತು ಎಂಬ ಬಗ್ಗೆ ವರದಿ ಮಾಡಬೇಕು ಎಂದು ಸೂಚಿಸಿದರು.


Share this with Friends

Related Post