Mon. Dec 23rd, 2024

ಎಚ್.ಡಿ ಕೆ ವಿರುದ್ಧದ ಡಿನೋಟಿಫಿಕೇಷನ್ ದಾಖಲೆಗಳನ್ನ ನೋಡಿಲ್ಲ.:ಸಿಎಂ

Share this with Friends

ಮೈಸೂರು: ಎಚ್.ಡಿ ಕುಮಾರಸ್ವಾಮಿ ವಿರುದ್ಧ ಡಿನೋಟಿಫಿಕೇಷನ್ ಸಂಬಂಧ
ದಾಖಲೆಗಳನ್ನ ಸಚಿವರು ಬಿಡುಗಡೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ನಾನು ಆ ದಾಖಲೆಗಳನ್ನ ನೋಡಿಲ್ಲ,ನೋಡುತ್ತೇನೆ,ಆ ಭೂಮಿಯನ್ನ ಕುಮಾರಸ್ವಾಮಿ ಅವರ ಭಾಮೈದನಿಗೆ ರಿಜಿಸ್ಟರ್ ಆಗಿದೆ,ಅತ್ತೆಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದು ಬಹಳ ಗಂಭೀರವಾದ ಪ್ರಕರಣ,
ನೋಡೋಣ, ಆ ಫೈಲನ್ನ ತರಿಸಿ ಪರಿಶೀಲನೆ ಮಾಡುತ್ತೇನೆ,ಕುಮಾರಸ್ವಾಮಿಯವರದು ಯಾವಗಲೂ ಹಿಟ್ ಅಂಡ್ ರನ್ ಕೇಸ್.
ತಮ್ಮ ಮೇಲಿನ ಎಲ್ಲಾ ಆರೋಪಕ್ಕೂ ಕೂಡ ಹಿಟ್ ಅಂಡ್ ರನ್ ರೀತಿ ಮಾತನಾಡಿ ಹೋಗುತ್ತಾರೆ ಎಂದು ಟೀಕಿಸಿದರು.

ಶಾಸಕ ಮುನಿರತ್ನ ವಿರುದ್ಧ ಬಹಳಷ್ಟು ಗಂಭೀರ ಪ್ರಕರಣಗಳಿವೆ,
ಎಸ್ಐಟಿ ತನಿಖೆ ಮಾಡುವಂತೆ ಸಚಿವರು ಹಾಗೂ ಶಾಸಕರು ಪತ್ರ ಕೊಟ್ಟಿದ್ದಾರೆ,ಅವರು
ಕೊಟ್ಟಿರುವ ಪತ್ರದ ಮೇಲೆ ಮುಂದಿನ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದರು.

ಮುನಿರತ್ನ ವಿರುದ್ದ ಬಹಳಷ್ಟು ಗಂಭೀರ ಪ್ರಕರಣಗಳಿವೆ,ಹಾಗಾಗಿ ವಿಶೇಷ ತನಿಖಾ ತಂಡದ ಅಗತ್ಯ ಇದೆ ಎಂದು ಸಚಿವರು ಕೆಲ ಶಾಸಕರು ಕೇಳಿದ್ದಾರೆ,ಈ ಬಗ್ಗೆ ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಗಣೇಶ ಮೂರ್ತಿ ಗಲಾಟೆಗಳು
ಪ್ರತಿ‌ನಿತ್ಯ ನಡೆದಿಲ್ಲ,ಇದುವರೆಗೆ ಎರಡು ಪ್ರಕರಣ ನಡೆದಿವೆ,
ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲಾ ಕಡೆ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಲು ತಿಳಿಸಿದ್ದೇನೆ,ಇನ್ನು
ನಾಗಮಂಗಲ ಪ್ರಕರಣದಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ಅಮಾನತು ಮಾಡಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.


Share this with Friends

Related Post