Sat. Apr 19th, 2025

`ಕೈ ಮುಗಿಯುವುದು’ ಕೋಮುವಾದವಲ್ಲ, ನಮ್ಮ ದೇಶದ ಸಂಸ್ಕೃತಿ : ಘೋಷವಾಕ್ಯ ತಿದ್ದುಪಡಿಗೆ ಖಂಡನೆ

Share this with Friends

ಬೆಂಗಳೂರು : ಶಾಲೆಗಳ ಪ್ರವೇಶದ್ವಾರದಲ್ಲಿ ಇದುವರೆಗೆ ‘ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂದು ಸುಸಂಸ್ಕೃತ ಸಂದೇಶ ನೀಡುವ ಫಲಕಗಳನ್ನು ಹಾಕಲಾಗಿತ್ತು. ಈಗ ರಾಜ್ಯದ ವಿಜಯಪುರ, ಶಿವಮೊಗ್ಗ ಸೇರಿದಂತೆ ಅನೇಕ ಶಾಲೆಗಳಲ್ಲಿ ಈ ಘೋಷವಾಕ್ಯದ ಫಲಕಗಳನ್ನು ಬದಲಾವಣೆ ಮಾಡಿ `ಧೈರ್ಯವಾಗಿ ಪ್ರಶ್ನಿಸಿ’ ಎಂಬ ವಾಕ್ಯವನ್ನು ಸೇರಿಸಲಾಗುತ್ತಿದೆ. ಇಲಾಖೆಯ ಈ ನಡೆಯನ್ನು ಹಿಂದೂ ಜನಜಾಗೃ ತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ತೀವ್ರವಾಗಿ ಖಂಡಿಸಿದ್ದಾರೆ.

ಅವರು ಪ್ರಕಟಣೆಯಲ್ಲಿ ಸರಕಾರವು ಕೈಮುಗಿಯುವುದನ್ನು ಕೋಮು ಭಾವನೆ ಎಂದು ಪರಿಗಣಿಸಿ ಮಕ್ಕಳಲ್ಲಿರುವ ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ನಾಶಪಡಿಸುವ ಷಡ್ಯಂತ್ರ ರೂಪಿಸಲಾಗಿದೆ. ಕೊರೋನಾ ಕಾಲದಲ್ಲಿ ಬ್ರಿಟನ್ ನ ಅಧ್ಯಕ್ಷ ಚಾರ್ಲಿಸ್ ಅವರು ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳ ಪ್ರಧಾನಿಗಳು ನಮಸ್ಕಾರ ಮಾಡುವ ಮೂಲಕ ಸ್ವಾಗತ ಸಂಸ್ಕೃತಿಯನ್ನು ಪಾಲಿಸಿದರು. ಇದು ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಯಾಗಿದೆ. ಇದನ್ನು ತೊಡೆದುಹಾಕಲು ಪ್ರಯತ್ನಿಸುತ್ತಿರುವ ಸರಕಾರದ ನಡೆ ಅತ್ಯಂತ ಖಂಡನೀಯವಾಗಿದೆ ಎಂದರು.

ಸರ್ವೋಚ್ಛ ನ್ಯಾಯಾಲಯದ ಫಲಕದಲ್ಲಿ ‘ಸತ್ಯಮೇವ ಜಯತೇ’ ಎಂದು ಬರೆದಿರುವುದಕ್ಕೂ ಕೋಮು ಬಣ್ಣ ಬಳಿಯುವಿರೇ ? ವಿಧಾನಸಭೆಯಲ್ಲಿ `ಸರಕಾರದ ಕೆಲಸ, ದೇವರ ಕೆಲಸ’ ಎಂದು ಹಾಕಲಾಗಿದೆ, ಇದಕ್ಕೂ ಕೋಮು ಬಣ್ಣ ಬಳಿಯುವಿರೇ ? ಎಂದು ಪ್ರಶ್ನಿಸುವಂಥಾಗಿದೆ, ನಮ್ಮ ದೇಶದ ಮೂಲ ಸಂಸ್ಕೃತಿಯನ್ನೇ ತೆಗೆದು ಹಾಕುತ್ತಿರುವಾಗ ಮುಂದೆ ಆ ಮಕ್ಕಳು ಸುಸಂಸ್ಕೃತರಾಗಿ ದೇಶ ನಡೆಸುವುದಾದರೂ ಹೇಗೆ ಎಂಬ ಆತಂಕವೂ ನಿರ್ಮಾಣವಾಗಿದೆ. ಒಟ್ಟಾರೆ ನೋಡುವುದಾದರೆ ಶಾಲೆಯಲ್ಲಿ ಹಿಂದೂವಿರೋಧವನ್ನು ಬಿತ್ತುವ ಮತ್ತು ಧರ್ಮದ ಮೇಲಿನ ಶ್ರದ್ಧೆ ನಷ್ಟ ಮಾಡುವ ಹಿನ್ನೆಲೆಯೇ ಸರಕಾರದ ಈ ನಡೆಗೆ ಕಾರಣವಾಗಿದೆ. ಪೋಷಕರು ಮತ್ತು ಮಕ್ಕಳು ಸರಕಾರದ ಈ ನೀಚ ಕೃತ್ಯವನ್ನು ಅರಿತು ಕೂಡಲೇ ಫಲಕಗಳ ಮರುಬದಲಾವಣೆಗೆ ಆಗ್ರಹಿಸಬೇಕು ಎಂದು ಕರೆ ನೀಡಿದರು.


Share this with Friends

Related Post