Mon. Dec 23rd, 2024

ಸದಸ್ಯತ್ವ ಅಭಿಯನಾನ ಯಶಸ್ವಿಗೊಳಿಸಲು ಬಿಜೆಪಿಗರಿಗೆ ಶ್ರೀವತ್ಸ ಕರೆ

Share this with Friends

ಮೈಸೂರು: ಬಿಜೆಪಿಯನ್ನು ಬಲಿಷ್ಠ ಗೊಳಿಸಲು ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನವನ್ನು ಕಾರ್ಯಕರ್ತರು ಯಶಸ್ವಿಗೊಳಿಸಬೇಕೆಂದು ಶಾಸಕ ಟಿ ಎಸ್ ಶ್ರೀವತ್ಸ ಕರೆ ನೀಡಿದರು.

ನಗರದ ಚಾಮುಂಡಿ ಬೆಟ್ಟದ ಪಾದದ ಬಳಿ ಬಿಜೆಪಿ ಸದಸ್ಯತ್ವ ಮಹಾಸಂಪರ್ಕ ಅಭಿಯಾನಕ್ಕೆ ಸದಸ್ಯತ್ವ ನೊಂದಣಿ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರತೀ ಬೂತ್ ನಲ್ಲಿ ಕನಿಷ್ಠ 300 ಸದಸ್ಯರಂತೆ ಕ್ಷೇತ್ರದಲ್ಲಿ 80000ಸಾವಿರಕ್ಕೂ ಅಧಿಕ ಸದಸ್ಯರನ್ನು ನೋಂದಣಿ ಮಾಡಬೇಕಿದೆ, ಮಾಹಾಸಂಪರ್ಕ ಅಭಿಯಾನದಲ್ಲಿ ಕ್ಷೇತ್ರಾದ್ಯಂತ ಎಲ್ಲ 265 ಬೂತ್ ಗಳಲ್ಲೂ ಏಕಕಾಲಕ್ಕೆ ಕಾರ್ಯಕರ್ತರು ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಪ್ರತಿ ಬೂತಿನಲ್ಲಿ ಗರಿಷ್ಠ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಗುರಿ ಹೊಂದಬೇಕು ಎಂದು ಶ್ರೀವತ್ಸ ತಿಳಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಉಪಾಧ್ಯಕ್ಷ ಜೋಗಿಮಂಜು, ಯುವಮೋರ್ಚಾ ಅಧ್ಯಕ್ಷ ಕೆ.ಎಂ. ನಿಶಾಂತ್, ಕೆ.ಆರ್. ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜಯಶಂಕರ್, ರಮೇಶ್, ಡಿ.ಪಿ. ಸುರೇಶ್, ಅಶೋಕ್, ಪ್ರದೀಪ್, ಮಧುಸೂಧನ್, ಕಿಶೋರ್, ವರುಣ್, ಹರ್ಷ, ಚರಣ್, ಪ್ರಶೀಕ್, ಶಿವಪ್ರೇರಣ್, ರವಿಕುಮಾರ್, ಶಾರದ, ಮಂಜುನಾಥ್ ಮತ್ತಿತರ ಮುಖಂಡರು ಹಾಜರಿದ್ದರು.


Share this with Friends

Related Post