ಹಿಂದೂ ದೇವಾಲಯ,ದಾರ್ಮಿಕ ಕೇಂದ್ರಗಳು ಸರ್ಕಾರದಿಂದ ಮುಕ್ತಗೊಳಿಸಲು ಒತ್ತಾಯಿಸಿ
ಪ್ರತಿಭಟನೆ
ಮೈಸೂರು: ಹಿಂದೂ ದೇವಾಲಯ ಮತ್ತು ದಾರ್ಮಿಕ ಕೇಂದ್ರಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಬೇಕೆಂದು ಒತ್ತಾಯಿಸಿ
ವಿಶ್ವ ಹಿಂದೂ ಪರಿಷತ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ್ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತ ಕಚೇರಿಯ ತಹಶೀಲ್ದಾರ್ ಶಿವಪ್ರಸಾದ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಘಟಕದ ಅಧ್ಯಕ್ಷ ಮಹೇಶ್ ಕಾಮಾತ್ ಅವರು,
ಲಕ್ಷಾಂತರ ವರ್ಷದಿಂದ ಸನಾತನ ಹಿಂದೂ ಧರ್ಮ ಇದೆ, ದೇಶದಲ್ಲಿ ಮುಸಲ್ಮಾನರಿಗೆ ವಕ್ಫ ಬೋರ್ಡ್ ಹಾಗೂ ಕ್ರೈಸ್ತರಿಗೆ ಅವರದೇ ಬೋರ್ಡ್ ಇದೆ,ಹಾಗೆಯೇ ಬಹುಸಂಖ್ಯಾತರಾದ ಹಿಂದುಗಳಿಗೂ ಸನಾತನ ಬೋರ್ಡ ಏಕೆ ರಚಿಸಬಾರದು ಎಂದು ಪ್ರಶ್ನಿಸಿದರು.
ಸರ್ಕಾರ ಕೇವಲ ದೇವಸ್ಥಾನಗಳನ್ನ ಮಾತ್ರ ಮುಜರಾಯಿ ಇಲಾಖೆಗೆ ಸೇರಿಸಿದೆ, ಭಕ್ತರ ದೇಣಿಗೆಯಿಂದ ದೇವಸ್ಥಾನಗಳು ನಡೆಯುವಂತೆ ಮಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ಆಡಳಿತ ನಡೆಸಲು ಕೊಡಬೇಕು ಎಂದು ಒತ್ತಾಯಿಸಿದರು.
ಇದರಿಂದ ಮುಂದೆಂದೂ ಯಾವುದೇ ಧರ್ಮದವರು ಸರ್ಕಾರ ರಚಿಸಿದರೂ ಹಸ್ತ ಕ್ಷೇಪಮಾಡುವಂತಾಗಬಾರದು ಎಂದು ಹೇಳಿದರು.
ಆಂದ್ರದಲ್ಲಿ ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರ ಮುಸ್ಲಿಮರಿಗೆ ಹಾಗೂ ಕ್ರಿಶ್ಚನ್ನರನ್ನು ಟಿ ಟ ಡಿ ಆಡಳಿತಕ್ಕೆ ನೇಮಿಸಿದ ಕಾರಣ ಹಲವು ಮುಸ್ಲೀಂ ಜನರಿಂದ ತುಪ್ಪ ಖರೀದಿಸಿದ ಪರಿಣಾಮ ಇಂತಹ ಘಟಣೆ ನಡೆದಿದೆ ಆದ್ದರಿಂದ ಎಲ್ಲಾ ದೇವಸ್ಥಾನ ಹಾಗೂ ದಾರ್ಮಿಕ ಕೇಂದ್ರಗಳು ಸರ್ಕಾರದಿಂದ ಮುಕ್ತಿ ಹೊಂದಬೇಕೆಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಅಂಬಿಕಾ ಜೀವನ್, ಸಹ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು, ಜಯಶ್ರೀ ಶಿವರಾಂ, ಗೋರಕ್ಷಾ ಪ್ರಮುಖ್ ಶಿವರಾಜ್, ಸೇವಾ ಪ್ರಮುಖ್ ಲೋಕೇಶ್ ,ಸವಿತಾ ಘಾಟ್ಕೆ
ಸೇರಿದಂತೆ ಹಲವಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.