Mon. Dec 23rd, 2024

ಬಾಲ್ ಬ್ಯಾಡ್ಮಿಂಟನ್ ನಂಜನಗೂಡು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಥಮ

Share this with Friends

ಮೈಸೂರು: ಮೈಸೂರು ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನವನ್ನು ಪಡೆದಿದೆ.

ಈಗ ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು
ಬಿಜಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದೆ.

ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಆದಿಲ್ ಹುಸೇನ್, ತಂಡದ ನಾಯಕ ಕಿರಣ್, ಹಾಗೂ ಆಟಗಾರರಾದ ಧನುಷ್, ಪ್ರೀತಮ್, ದರ್ಶನ್, ನಿಖಿಲ್, ಜಯಂತ್, ಅಭಿ, ಪ್ರತಾಪ್, ಅನಿಲ್ ಹಾಗೂ ವಿದ್ಯಾರ್ಥಿಗಳಾದ ಮೋಹನ್, ದಿಲೀಪ್, ಮಾದೇಶ್, ಭಾರ್ಗವ್ ರವರನ್ನು ಕಾಲೇಜಿನ ಪ್ರಾಂಶುಪಾಲರಾದ ಸಿ ಅರ್ ದಿನೇಶ್ ಮತ್ತು ಸಿಬ್ಬಂದಿ ವರ್ಗ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ


Share this with Friends

Related Post