Mon. Dec 23rd, 2024

ನಾನು ತಪ್ಪು ಮಾಡಿಲ್ಲ;ರಾಜೀನಾಮೆ ಕೊಡುವುದಿಲ್ಲ-ಸಿದ್ದರಾಮಯ್ಯ‌

Share this with Friends

ಮೈಸೂರು: ನಾನು ತಪ್ಪು ಮಾಡಿಲ್ಲ, ರಾಜೀನಾಮೆ ಕೊಡುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ‌ ತಿಳಿಸಿದ್ದಾರೆ

ಮೈಸೂರಿಗೆ‌ ಮೂರು ದಿನಗಳ ಪ್ರವಾಸದಲ್ಲಿರುವ ಸಿಎಂ, ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ
ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರ ರಾಜಭವನ ದುರ್ಬಳಕೆ ಮಾಡಿಕೊಳ್ಳುತ್ತಿದೆ ನನ್ನ ರಾಜೀನಾಮೆ ಕೇಳಲು ಬಿಜೆಪಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ರಾಜ್ಯಪಾಲರು ಆಡಳಿತದಲ್ಲಿ ತಲೆ ಹಾಕಬಾರದು, ರಾಜ್ಯದ ಜನರು ನಮಗೆ 5 ವರ್ಷ ಅಧಿಕಾರ ನಡೆಸಿ ಅಭಿವೃದ್ದಿ ಮಾಡಿ ಎಂದು ಅವಕಾಶ ನೀಡಿದ್ದಾರೆ,ಕೇಂದ್ರ ಸರ್ಕಾರ ರಾಜಭವನ ಸೇರಿ ಎಲ್ಲಾ ಕಡೆ ಸಿಬಿಐ, ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಗೋದ್ರಾ ಗಲಭೆ ಆಗಿದ್ದಾಗ ಮೋದಿ ರಾಜೀನಾಮೆ ನೀಡಿದ್ದರಾ, ಎಫ್ ಐಆರ್ ಆಗಿ ಜಾಮೀನು ಪಡೆದಿರುವ ಕುಮಾರಸ್ವಾಮಿ ಯಾಕೆ ರಾಜೀನಾಮೆ ಕೊಟ್ಟಿಲ್ಲ,ನಾನು ತಪ್ಪು ಮಾಡಿಲ್ಲ,ರಾಜೀನಾಮೆ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಕಾನೂನು ಹೋರಾಟ ಮುಂದುವರೆಸುತ್ತೇನೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಕಡಕ್ಕಾಗಿ ತಿಳಿಸಿದರು.


Share this with Friends

Related Post