Mon. Dec 23rd, 2024

ಬಿಜೆಪಿ ಮಹಿಳಾ ಮೋರ್ಚಾ: ರಂಗೋಲಿ ಸ್ಪರ್ಧೆ

Share this with Friends

ಮೈಸೂರು: ಬಿಜೆಪಿ ಮಹಿಳಾ ಮೋರ್ಚ ಚಾಮುಂಡೇಶ್ವರಿ ಗ್ರಾಮಾಂತರ ವತಿಯಿಂದ ಬೋಗಾದಿ ಬಸವೇಶ್ವರ ಸಮುದಾಯ ಭವನದ ಬಳಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ವೇಳೆ ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು,ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.
ಇದೇ‌ ವೇಳೆ‌ ಗಿಡ ನೆಡುವ ಕಾರ್ಯವನ್ನೂ ನೆರವೇರಿಸಲಾಯಿತು.

ಪಕ್ಷದ ಹಿರಿಯರಾದ ಗೋಪಾಲ್ ರಾವ್,ಕವೀಶ್ ಗೌಡ, ಮಂಡಲ ಅಧ್ಯಕ್ಷ ಪೈಲ್ವಾನ್ ರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿಎಮ್ ರಘು. ಮಹೇಶ್, ಅರುಣ್ ಕುಮಾರ್, ನಂದೀಶ್ ,ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಚಾಮುಂಡೇಶ್ವರಿ ಗ್ರಾಮಾಂತರ ಅಧ್ಯಕ್ಷೆ ಸವಿತಾ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಯಮುನಾ ಕೃಷ್ಣಮೂರ್ತಿ, ಇಂದಿರಾ, ಉಪಾಧ್ಯಕ್ಷರುಗಳಾದ ಕೃಷ್ಣವೇಣಿ, ಗೀತಾ ಪ್ರಮೋದ್, ಪದಾಧಿಕಾರಿಗಳಾದ ರೇಖಾ, ಶಾಲಿನಿ, ಶ್ರುತಿ, ಮಾಯಾ, ರಾಧಾ, ಸಂಚಾಲಕರಾದ ಝಾನ್ಸಿ ರಾಣಿ, ಪ್ರಮೀಳಾ ನಾಯಕ್, ಅನಿತಾ ಮತ್ತಿತರರು ಹಾಜರಿದ್ದರು.


Share this with Friends

Related Post