Mon. Dec 23rd, 2024

ಎರಡು ಹನಿ ಲಸಿಕೆ ಹಾಕಿಸಿ – ಫೋಲಿಯೋ ಮುಕ್ತ ರಾಷ್ಟ್ರ ನಿರ್ಮಿಸಿ‌: ಮಾ.3 ಲಸಿಕೆ ಕಾರ್ಯಕ್ರಮ

Share this with Friends

ಬೆಂಗಳೂರು, ಫೆ.19: ಐದು ವರ್ಷದ ಒಳಗಿನ ಪ್ರತಿ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸಿ
ಫೋಲಿಯೋ ಮುಕ್ತ ರಾಷ್ಟ್ರ ನಿರ್ಮಿಸುವಂತೆ
ಸರ್ಕಾರಗಳು ಮನವಿ ಮಾಡಿವೆ.

ನಿಮ್ಮ ಮಗುವಿಗೆ ಎರಡು ಹನಿ ಲಸಿಕೆ ಹಾಕಿಸಿ – ಫೋಲಿಯೋ ಮುಕ್ತ ರಾಷ್ಟ್ರ ನಿರ್ಮಿಸಿ ಎಂಬ ಘೋಷವಾಖ್ಯದೊಂದಿಗೆ ಮಾ.3ರಂದು 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿದೆ.

ಭಾರತವು ಪೋಲಿಯೋ ಮುಕ್ತ ದೇಶವಾಗಿದೆ, ಆದರೆ ಕೆಲವು ದೇಶಗಳಲ್ಲಿ ಪೋಲಿಯೋ ಇನ್ನೂ ಭೀತಿಯನ್ನು ಉಂಟು ಮಾಡುತ್ತಿದೆ, ನಮ್ಮ ದೇಶದಲ್ಲಿ ಅದು ಮರುಕಳಿಸುವ ಸಾಧ್ಯತೆ ಇದ್ದು ಮಕ್ಕಳ ಸಂಪೂರ್ಣ ರಕ್ಷಣೆಯನ್ನು ದೃಢಪಡಿಸಿಕೊಳ್ಳಿ ಎಂದು ಸರ್ಕಾರ ತಿಳಿಸಿದೆ.

ಪೋಲಿಯೋ ವಿರುದ್ಧ ಭಾರತ ಸಾಧಿಸಿರುವ ಗೆಲುವನ್ನು ಮುಂದುವರಿಸಲು ನಮ್ಮ ಜೊತೆ ಕೈಜೋಡಿಸಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.


Share this with Friends

Related Post