Mon. Dec 23rd, 2024

ಯುವ ಸಂಭ್ರಮದಲ್ಲಿ ಮನಸೆಳೆದ ನೃತ್ಯಗಳು

Share this with Friends

ಮೈಸೂರು,ಅಕ್ಟೋಬರ್‌.1: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮದ 7ನೇ‌ ದಿನದ ನೃತ್ಯ ಸೊಬಗು ಎಲ್ಲರ ಮನ ಸೆಳೆದವು.

ಮೈಸೂರಿನ ಜೆ ಎಸ್ ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಲಾತಂಡದವರು ಮಾಡಿದ ಮಹಿಷ ಮರ್ದಿನಿ ನೃತ್ಯ, ಹೆಚ್ ಡಿ ಕೋಟೆ ತಾಲ್ಲೂಕಿನ ವಿದ್ಯಾ ಸಿಂಚನ ಪದವಿ ಪೂರ್ವ ಕಾಲೇಜು ತಂಡದವರ ಕರ್ನಾಟಕ ಜಾನಪದ ವೈವಿಧ್ಯತೆ,ಕೆ ಆರ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದವರ ನೃತ್ಯ ಎಲ್ಲರ ಗಮನ ಸೆಳೆಯಿತು.

ಮೈಸೂರಿನ ಡಿ ಪೌಲ್ ಕಾಲೇಜು ತಂಡದ ನವದುರ್ಗಿ ನವವೈಭವ ನೃತ್ಯ ಪ್ರದರ್ಶನ ಅದ್ಭುತ ವಾಗಿತ್ತು, ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್ ತಂಡದ ಶಿವ ತಾಂಡವ ನೃತ್ಯ ಚೆನ್ನಾಗಿತ್ತು.

ಬೆಂಗಳೂರಿನ ವಿವಿಎನ್ ಪದವಿ ಪೂರ್ವ ಕಾಲೇಜಿನ ತಂಡದವರು ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವನಕೆ ಒಬ್ಬವ ಕುರಿತಾದ ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ 57 ನೃತ್ಯ ‌ಪ್ರದರ್ಶನಗಳನು ಮಾಡಲಾಯಿತು‌ ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ, ಜಾನಪದ ಕಲೆ ಮತ್ತು ನೃತ್ಯ, ಭಾರತೀಯ ಯೋಧರ ಪಾತ್ರ, ದೇಶ ಭಕ್ತಿ ಹೋರಾಟಗಾರರ ಕೊಡುಗೆ ಮುಂತದವು ಗಮನ ಸೆಳೆದವು.


Share this with Friends

Related Post