Mon. Dec 23rd, 2024

ಕುಶಾಲತೋಪು ತಾಲೀಮು:ದೈರ್ಯದಿಂದಇದ್ದ ಗಜಪಡೆ,ಅಶ್ವಾರೋಹಿದಳ

Share this with Friends

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕಾಗಿ ಗಜಪಡೆ ಮತ್ತು ಅಶ್ವಾರೋಹಿ ದಳದ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸುವ ಅಂತಿಮ ಹಂತದ ತಾಲೀಮು ನೆರವೇರಿದ್ದು ದೈರ್ಯದಿಂದ ಎದುರಿಸಿದವು

ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ನಡೆದ ತಾಲೀಮಿನಲ್ಲಿ
ಗಜಪಡೆಯ ಅತ್ಯಂತ ಹಿರಿಯ ಆನೆ ವರಲಕ್ಷ್ಮಿ ಹೊರತುಪಡಿಸಿ ಉಳಿದ 13 ಆನೆಗಳು ಹಾಗೂ ಅಶ್ವಾರೋಹಿ ದಳ ಪಾಲ್ಗೊಂಡಿದ್ದವು.

ಈ ವೇಳೆ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಏಳು ಫಿರಂಗಿ ಗಾಡಿಗಳಿಂದ ತಲಾ ಮೂರು ಬಾರಿ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಿದರು.

ಗಜಪಡೆ ಹಾಗೂ ಅಶ್ವಾರೋಹಿ ದಳ ಶಬ್ದಕ್ಕೆ ಅಂಜದೇ ಧೈರ್ಯದಿಂದ‌ ನಿಂತಿದ್ದವು ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.


Share this with Friends

Related Post