Mon. Dec 23rd, 2024

ಕಿರುತೆರೆಯ ಹಿರಿಯ ನಟ ರಿತುರಾಜ್ ಸಿಂಗ್ ಹೃದಯಾಘಾತದಿಂದ ನಿಧನ

Rituraj Singh
Share this with Friends

ನವದೆಹಲಿ: ಹಿಂದಿ ಕಿರುತೆರೆ ನಟ ರಿತುರಾಜ್ ಸಿಂಗ್ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.ಅವರಿಗೆ 59 ವರ್ಷ ವಯಸ್ಸಾಗಿತ್ತು. ನಟ ಅಮಿತ್ ಬೆಹ್ಲ್ ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿ ರಿತುರಾಜ್ ಸಿಂಗ್ ಅವರು 12:30ಕ್ಕೆ ನಿಧನರಾದರು. ಹಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಮೇಲೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ಮತ್ತೆ ಈ ಸಮಸ್ಯೆಯಿಂದ ಅಹಿತಕರ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದ ರಿತುರಾಜ್ 90 ರ ದಶಕದಲ್ಲಿ ಜೀ ಟಿವಿಯಲ್ಲಿ ರಿಯಾಲಿಟಿ ಗೇಮ್ ಶೋ ‘ಟೋಲ್ ಮೋಲ್ ಕೆ ಬೋಲ್’ ಮೂಲಕ ತಮ್ಮದೇ ಆದ ಐಡೆಂಟಿಟಿಯನ್ನು ಸೃಷ್ಟಿಸಿಕೊಂಡ ರಿತುರಾಜ್ ಸಿಂಗ್, ಅನೇಕ ಧಾರಾವಾಹಿಗಳು, ಚಲನಚಿತ್ರಗಳು ಮತ್ತು ಒಟಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. 1993 ರಲ್ಲಿ ಜೀ ಟಿವಿಯಲ್ಲಿ ಪ್ರಸಾರವಾದ ‘ಬನೇಗಿ ಅಪ್ನಿ ಬಾತ್’ ಕಾರ್ಯಕ್ರಮವು ಸಾಕಷ್ಟು ಜನಪ್ರಿಯವಾಯಿತು. ‘ಹಿಟ್ಲರ್ ದೀದಿ’, ‘ಜ್ಯೋತಿ’, ‘ಶಪತ್’, ‘ಅದಾಲತ್’, ‘ಆಹತ್’, ‘ದಿಯಾ ಔರ್ ಬಾತಿ’, ವಾರಿಯರ್ ಹೈ’, ‘ಲಾಡೋ 2’ ಧಾರಾವಾಹಿಗಳಲ್ಲಿಯೂ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ರಿತುರಾಜ್ ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಅನುಪಮಾದಲ್ಲಿ ಕಾಣಿಸಿಕೊಂಡರು. ಅವರ ಪಾತ್ರದೊಂದಿಗೆ ಸಾಕಷ್ಟು ಜನಮನ್ನಣೆ ಗಳಿಸಿದರು. ಯೇ ರಿಶ್ತಾ ಕ್ಯಾ ಕೆಹ್ಲಾತಾ ಚಿತ್ರದಲ್ಲಿ ಕೂಡ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ. ನಟನ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.


Share this with Friends

Related Post