Fri. Nov 1st, 2024

ಕರ್ನಾಟಕ ಸಾಹಿತ್ಯ ಲೋಕದಿಂದ ಪ್ರಜಾಕವಿ ನಾಗರಾಜ್ ನೇತೃತ್ವದಲ್ಲಿ “ಚತುರಂಗತಜ್ಞ ಕೆಂಪೇಗೌಡ” ಪುಸ್ತಕ ಲೋಕಾರ್ಪಣೆ

Share this with Friends

ಬೆಂಗಳೂರು : ಕರ್ನಾಟಕ ಸಾಹಿತ್ಯ ಲೋಕ ಸಂಸ್ಥೆಯಿಂದ ಚತುರಂಗತಜ್ಞ ಕೆಂಪೇಗೌಡರ ಪುಸ್ತಕ ನೆಲಮಂಗಲದಲ್ಲಿ ಭಾನುವಾರ ಪ್ರಜಾಕವಿ ನಾಗರಾಜ್ ರವರು ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಪೂರ್ಣಿಮ ಸುಗ್ಗರಾಜ್ ರವರು ಪ್ರಜಾಕವಿ ನಾಗರಾಜ್ ರವರು ರಾಜ್ಯದ 134 ಕವಿಗಳನ್ನು ಸೇರಿಸಿ ಚತುರಂಗತಜ್ಞ ಕೆಂಪೇಗೌಡರ ಪುಸ್ತಕ ಲೋಕಾರ್ಪಣೆ ಮಾಡಿರುವುದು ತುಂಬಾ ಶ್ಲಾಘನೀಯ. ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರ ಕೊಡುಗೆ ಅಪಾರ ಎಂದರು ಹಾಗೆಯೇ ಇದೇ ರೀತಿ ಸಾಹಿತ್ಯ ಬೆಳವಣಿಗೆ ನಿರಂತರವಾಗಿ ನಡೆಯುತ್ತಿರಲಿ ಎಂದು ತಿಳಿಸಿದರು

ಹಿರಿಯ ಸಾಹಿತಿಗಳು ಹಾಗೂ ಪತ್ರಕರ್ತರಾದ ಮಣ್ಣಿಮೋಹನ್ ಮಾತನಾಡಿ ಕವಿಗಳು ಹೆಚ್ಚು ಹೆಚ್ಚು ಕವನಗಳನ್ನು ಬರೆಯಬೇಕು ಸಾಹಿತ್ಯ ಲೋಕಕ್ಕೆ ಹಲವಾರು ಪುಸ್ತಕಗಳನ್ನು ನೀಡಬೇಕು ಎಂದರು ಹಾಗೆಯೇ ಕವಿಗಳು ಯಾವುದೇ ಸ್ನೇಹಿತರು ಸಿಗಲಿ ಸಾಹಿತ್ಯದ ವಿಷಯಗಳನ್ನು ಮಾತ್ರ ಮಾತಾಡಬೇಕು ಬೇರೆ ಯಾವುದೇ ವಿಚಾರಗಳಿಗೆ ಇಷ್ಟಾದ ನೀಡಬಾರದು ಎಂದು ಕವಿಗಳಿಗೆಕಿವಿಮಾತು ನೀಡಿದರು

ರಾಷ್ಟ್ರೀಯ ಕನ್ನಡ ಸಾಹಿತ್ಯ ಲೋಕ ಸಂಸ್ಥೆಯ ಸಂಸ್ಥಾಪಕರಾದ ಪ್ರಜಾವಾಣಿ ನಾಗರಾಜ್ ರವರು ಮಾತನಾಡಿ ಕವಿಗಳು ಉತ್ತಮವಾಗಿ ಕೆಂಪೇಗೌಡರ ಬಗ್ಗೆ ಕವನ ರಚಿಸಿದ್ದಾರೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಕವಿಗಳು ಆಗಮಿಸಿದ್ದೀರಾ ನಿಮಗೆ ನಮ್ಮ ಸಂಸ್ಥೆಯಿಂದ ಹೃದಯ ತುಂಬಿದ ಧನ್ಯವಾದಗಳು ಎಂದರು ‌ಹಾಗೇಯೇ ಎಲ್ಲಾ ಕವಿಗಳು ಶಿಸ್ತುಅನ್ನು ಪಾಲಿಸಬೇಕು ಕಾರ್ಯಕ್ರಮ ಮುಗಿಯುವವರೆಗೂ ಎಲ್ಲಾರೂ ಇರಬೇಕು ಕವನಗಳನ್ನು ಎಲ್ಲಾರೂ ವಾಚನ ಮಾಡುವವರಿಗೂ ಎಲ್ಲಾರೂ ಇರಬೇಕು ಇದು ನಿಮ್ಮ ಕಾರ್ಯಕ್ರಮ ಎಂದು ತಿಳಿಸಿದರು

ಸಾಹಿತಿಗಳಾದ ಮಹೇಶ್ ಬೆಂಗಳೂರು ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಂಪೇಗೌಡರ ಬಗ್ಗೆ ಉತ್ತಮವಾದ ಕವನ ವಾಚನ ಮಾಡಿ ಭಾಗವಹಿಸಿದ 134 ಕವಿಗಳಿಗೂ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ ರೂಪಿಸಿದ ಪ್ರಜಾಕವಿ ನಾಗರಾಜ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು

ಕಾರ್ಯಕ್ರಮದಲ್ಲಿ ವೀಣಾ ಮತ್ತು ಅನಶ್ರೀ ರವರು ಪ್ರಾರ್ಥನಾ ಗೀತೆ ಹಾಡಿದರು ಸಾಹಿತಿಗಳಾದ ವೆಂಕಟೇಶ್ ಆರ್.ಚೌತಾಯಿ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಿದ್ದರಾಜು, ಅಧ್ಯಕ್ಷ ಸುನೀಲ್ ಕುಮಾರ್ ಮೂಡ್ ,ಆನಂದ್ ,ಮಹೇಶ್ ಬೆಂಗಳೂರು,ಲತಾ‌.ಕೆ.ಎಸ್ . ಹೆಗಡೆ , ವೀಣಾ,ಸುಮಾ,ಮಧುರ ಗಾಂವ್ಕರ್, ಸುವರ್ಣ ಗಾಂವ್ಕರ್,‌ಆನಂದ ವೈ ಮೌರ್ಯ ಹಾಗೂ ಇನ್ನಿತರ ಕವಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು


Share this with Friends

Related Post