Wed. Dec 25th, 2024

ಆನೆಗಳ ಸಾವಿಗೆ ಅರಣ್ಯ ಇಲಾಖೆ ಬೇಜವಾಬ್ದಾರಿ ಕಾರಣ: ತೇಜಸ್ವಿ ಆರೋಪ

Share this with Friends

ಮೈಸೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಯಲ್ಲಿ ಕಂದಕಕ್ಕೆ ಬಿದ್ದು ಆನೆಗಳ ಮೃತಪಟ್ಟಿರುವುದಕ್ಕೆ ಅರಣ್ಯ‌ ಇಲಾಖೆ‌ ಬೇಜವಾಬ್ದಾರಿ ಕಾರಣ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.

ಮೈಸೂರು ಜಿಲ್ಲೆ, ನಂಜನಗೂಡು
ತಾಲೂಕಿನ ಮಲ್ಲಹಳ್ಳಿ ಗ್ರಾಮದ ಬಳಿ ಕಂದಕಕ್ಕೆ ಬಿದ್ದು ಆನೆ ಮೃತಪಟ್ಟಿದೆ.
ಅದೇ ರೀತಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವನ್ಯಜೀವಿ ವ್ಯಾಪ್ತಿಯ ಮಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ 45 ವರ್ಷದ ವಯಸ್ಸಿನ ಗಂಡಾನೆ ಕಂದಕಕ್ಕೆ ಬಿದ್ದು ಮೃತಪಟ್ಟಿದೆ.

ಈ ಎರಡೂ ಆನೆಗಳು ಕಂದಕಕ್ಕೆ ಬಿದ್ದು ಮೃತಪಟ್ಟಿರುವುದು ದುರಂತ ಎಂದು ತೇಜಸ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಭಾಗಗಳಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಗ್ರಾಮಸ್ಥರು ಅನೇಕ ಕಡೆಗಳಲ್ಲಿ ಅನಧಿಕೃತವಾಗಿ ಕಂದಕಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆಹಾರ ಅರಸಿ ಗ್ರಾಮದ ಕಡೆ ಆನೆಗಳು ಬರುವುದು ಸಹಜ. ಆದರೆ ಕಂದಕಕ್ಕೆ ಬಿದ್ದು ಮೃತಪಟ್ಟಿರುವುದು ಅಸಹಜ ಸಾವು ಪ್ರಕರಣ ಎಂದು ಅರಣ್ಯಧಿಕಾರಿಗಳು ಪರಿಗಣಿಸಿ ಕಂದಕ ನಿರ್ಮಿಸಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಆನೆ ಕಂದಕಕ್ಕೆ ಬಿದ್ದ ಬಗ್ಗೆ ಗ್ರಾಮಸ್ಥರು ತಿಳಿಸಿದರೂ ಕೂಡಾ ಅರಣ್ಯ ಅಧಿಕಾರಿಗಳು ತಡವಾಗಿ ಸ್ಥಳಕ್ಕೆ ಬಂದ ಕಾರಣ ಆನೆ ಕೊನೆ ಉಸಿರು ಎಳೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆನೆಯ ಒಂದು ಕಣ್ಣು ಸಂಪೂರ್ಣ ದೃಷ್ಟಿಯನ್ನು ಕಳೆದು ಕೊಂಡಿತ್ತು ಇನ್ನೊಂದು ಕಣ್ಣಿಗೆ ಪೊರೆ ಬಂದಿತ್ತು ಕರುಳಿನ ಕಾಯಿಲೆ ಇಂದಲೂ ಬಳಲುತಿತ್ತು ಆನೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.

ಆದರೆ ಸತೀಶ್ ಕುಮಾರ್ ಹೇಳಿಕೆಯಲ್ಲಿ ಅನುಮಾನ ಉಂಟಾಗುತ್ತಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.

ಕೂಡಲೇ ರಾಜ್ಯ ಸರ್ಕಾರ ಆನೆಗಳ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.


Share this with Friends

Related Post