Mon. Dec 23rd, 2024

ಜಾತಿಗಣತಿ ಜಾರಿ ಮಾಡಲಿ: ಬಿ.ಕೆ.ಹರಿಪ್ರಸಾದ್‌ ಒತ್ತಾಯ

Share this with Friends

ಬೆಂಗಳೂರು: ಸರ್ಕಾತ‌ ಜಾತಿಗಣತಿ ಜಾರಿ ಮಾಡಲೇಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮೀಸಲಾತಿಯ ಒಳಮುಖ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ‌ ಅವರು,ಮೀಸಲಾತಿಯನ್ನು ಉಳಿಸುವುದು, ಜಾತಿ ಹಾಗೂ ಜನಗಣತಿಯನ್ನು ನಡೆಸುವುದು ನಮ್ಮ ಪಕ್ಷದ ಆದ್ಯ ಕರ್ತವ್ಯ.ಅಧಿಕಾರಕ್ಕಾಗಿ ಮೀಸಲಾತಿ ವಿಷಯದಲ್ಲಿ ರಾಜಿಯಾಗಲು ಎಂದೂ ಸಾಧ್ಯವಿಲ್ಲ ಎಂದು ಹೇಳಿದರು.

ಚುಣಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಜಾತಿಗಣತಿ ಜಾರಿ ವಿಚಾರ
ಇರುವುದರಿಂದ ಕೂಡಲೇ ಜಾರಿ‌ ಮಾಡಬೇಕೆಂದು ಹೇಳಿದರು.

ಜಾತಿಗಣತಿ ಜಾರಿ ಮಾಡಿದರೆ ಸರ್ಕಾರ ಬಿದ್ದು ಹೋಗಲಿದೆ ಎಂಬ ಭಯ ಏಕೆ,ಯಾವುದಕ್ಕೂ ಅಂಜದೆ ಜಾತಿಗಣತಿ ಜಾರಿಯಾಗಲೇಬೇಕು ಎಂದು ಹೇಳಿದ್ದಾರೆ.

ಜಾತಿಗಣತಿ ಜಾರಿಗೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆಯೊ ಗೊತ್ತಿಲ್ಲ,
ಜಾತಿಗಣತಿಯಿಂದ ಎಲ್ಲಾ ಸಮುದಾಯಗಳಿಗೂ ಅನುಕೂಲ ಆಗಲಿದೆ ಎಂದು ತಿಳಿಸಿದರು.


Share this with Friends

Related Post