Tue. Dec 24th, 2024

ಯಶಸ್ವಿಯಾದ ದಸರಾ ಯೋಗ ಸರಪಳಿ

Share this with Friends

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಯೋಗ ದಸರಾ ಉಪ ಸಮಿತಿ ವತಿಯಿಂದ ಅರಮನೆಯ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಯೋಗ ಸರಪಳಿ ಯಶಸ್ವಿಯಾಗಿ ‌ನೆರವೇರೊತು.

ಈ ಯೋಗ ಸರಪಳಿಯಲ್ಲಿ 4000 ಕ್ಕೂ ಹೆಚ್ಚು ಯೋಗಪಟುಗಳು ಮತ್ತಿತರರು‌ ಪಾಲ್ಗೊಂಡಿದ್ದರು.

ಪ್ರಜಾಪ್ರಭುತ್ವಕ್ಕಾಗಿ ಯೋಗ ಹೆಸರಿನಲ್ಲಿ ಆಯೋಜಿಸಲಾಗಿದ್ದ ಯೋಗ ಸರಪಳಿಯನ್ನು ಯೋಗ ಅಧಿಕಾರೇತರ ಉಪಸಮಿತಿಯ ಅಧ್ಯಕ್ಷರ ಎಂ.ಮಹೇಶ್ ಉದ್ಘಾಟಿಸಿದರು.

ಯೋಗ ಸರಪಳಿಯಲ್ಲಿ ಸುಮಾರು 4000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಬೆಳಗ್ಗೆ 6 ಗಂಟೆಯಿಂದಲೆ ಅರಮನೆ ಆವರಣ ಸಾವಿರಾರು ಜನರಿಂದ ತುಂಬಿತ್ತು.

ಸಂವಿಧಾನ ಪೀಠಿಕೆ ಬೋಧನೆ, ಪ್ರಜಾಪ್ರಭುತ್ವದ ಆಶಯಗಳನ್ನು ಸಾರಿದ ಯೋಗ ಗುಚ್ಚ ಪ್ರದರ್ಶನ, ಯೋಗ ಗುಚ್ಚ ನೃತ್ಯ, ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜನರ ಮನ ಸೆಳೆಯಿತು.

ಯೋಗಪಟುಗಳು ಯೋಗ ಸೂರ್ಯ ನಮಸ್ಕಾರ, ವಜ್ರಾಸನ, ತ್ರಿಕೋನಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ಜೆ.ಎಸ್.ಎಸ್.ಸಮೂಹದ ಮುಖ್ಯಸ್ಥರಾದ ಶ್ರೀಹರಿ, ಯೋಗ ದಸರಾ ಉಪಸಮಿತಿಯ ವಿಶೇಷಾಧಿಕಾರಿ ಕೆ.ರಮ್ಯ, ಕಾರ್ಯಾಧ್ಯಕ್ಷ ಅನಂತರಾಜು, ಕಾರ್ಯದರ್ಶಿ ಪುಷ್ಪ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post