ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ದಸರಾ
ವೇಳೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಸಿಎಂ ಮತ್ತು ಡಿಸಿಎಂ ಗಳಿಗೆ ಶಿಲ್ಪಿ ರಾಜೇಶ್ ಅವರು ಪಂಚಲೋಹದ ವಿಗ್ರಹಗಳನ್ನು ಉಡುಗೊರೆ ನೀಡಲಿದ್ದಾರೆ.
ಮೈಸೂರಿನ ಗೌರಿಶಂಕರ ನಂದಿ ಧ್ವಜ ಸಂಘದಲ್ಲಿ ಅನೇಕ ವರ್ಷಗಳಿಂದ ಶಿಲ್ಪಿಯಾಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ ಶಿಲ್ಪಿ ಅವರು ತಮ್ಮ ತಂದೆಯವರ ಕಾಲದಿಂದ ನಡೆದುಕೊಂಡು ಬಂದಿರುವ ವಿಗ್ರಹ ಉಡುಗೊರೆ ಕೊಡುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಅದರಂತೆ ಈ ಬಾರಿ ಕೂಡ ಶಿಲ್ಪಿ ರಾಜೇಶ್ ಅವರು ರಾಜ್ಯದ ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಪಂಚಲೋಹದ ಕಾಡಸಿದ್ದೇಶ್ವರ ವಿಗ್ರಹವನ್ನು ಕೊಟ್ಟು ಶುಭ ಲಗ್ನದಲ್ಲಿ ಗೌರವಿಸಲಿದ್ದಾರೆ.
ವಿಶೇಷವೆಂದರೆ ರಾಜೇಶ್ ಅವರೇ ಈ ಎರಡೂ ವಿಗ್ರಹಗಳನ್ನು ಮಾಡಿದ್ದಾರೆ.
ನಮ್ಮ ಮೈಸೂರಿನ ಶಿಲ್ಪಿ ರಾಜೇಶ್ ಅವರಿಗೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.