ಮೈಸೂರು: ಸಿಲಿಕಾನ್ ವ್ಯಾಲಿ ಬಡಾವಣೆ, ಬೆಳವಾಡಿ ಮೈಸೂರಿನಲ್ಲಿ ರಕ್ಷಣಾ ಇಲಾಖೆಯ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿರುವ ಸೈನಿಕ ಅಕಾಡೆಮಿ ವತಿಯಿಂದ 92 ನೇ ಭಾರತೀಯ ವಾಯು ಸೇನಾ ದಿನಾಚರಣೆಯನ್ನು ವಿಶೇಷವಾಗಿ ಅರ್ಥಪೂರ್ಣ ಆಚರಿಸಲಾಯಿತು.
ವಾಯು ಸೇನೆ- ನಿವೃತ್ತ ಯೋಧ ರಾಮನಾರಾಯಣ, ರಕ್ತದಾನ ಶಿಬಿರ (ಲಯನ್ಸ್ ಕ್ಲಬ್ ಆಫ್ ಮೈಸೂರು ಶ್ರೀಗಂಧ ರವರ ಸಹಕಾರದಿಂದ), ಸೈನಿಕ ಅಕಾಡೆಮಿ (ರಿ) ಮೈಸೂರು ಸಂಸ್ಥೆಯಲ್ಲಿ ತರಬೇತಿ ಪಡೆದು 3 ನೇ ಬಾರಿ ರಾಷ್ಟ್ರೀಯ ದಾಖಲೆ ಭಾರತೀಯ ಭೂ ಸೇನೆಗೆ ಆಯ್ಕೆ ಆಗಿರುವ 56 ಅಗ್ನಿವೀರರು ಹಾಗೂ ಕರ್ನಾಟಕ ಪೊಲೀಸ್ ಇಲಾಖೆಗೆ ಆಯ್ಕೆ ಆಗಿರುವ 31 ಆರಕ್ಷಕರಿಗೆ, ಲಯನ್ಸ್ ಕ್ಲಬ್ ಮಲ್ಟಿಪಲ್ ಗವರ್ನರ್ ಕೃಷ್ಣೆ ಗೌಡ, ರೈತಬಾಂಧವ ಎಕೋ ಕೋಕನಟ್ ಚೇರ್ಮನ್ ಭರತ್ ಕುಮಾರ್ ಮತ್ತು ಬನ್ನಿ ಕುಪ್ಪೆ ಪಂಚಾಯತಿ ಸದಸ್ಯ ನಿಂಗೇಗೌಡ ಅವರುಗಳನ್ನು ಸನ್ಮಾನಿಸುವ ಮೂಲಕ ವಾಯು ಸೇನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಲಯನ್ಸ್ ಕ್ಲಬ್ ಆಫ್ ಮೈಸೂರು ಶ್ರೀಗಂಧ,
ನಾಶಕ್ ನೌವ್ವಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಮೈಸೂರು,
ಸಿಲಿಕಾನ್ ವ್ಯಾಲಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಳವಾಡಿ,
ಹೂಟಗಳ್ಳಿ ಕೆ ಹೆಚ್ ಬಿ ವರ್ತಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇವರುಗಳ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.
ಸೈನಿಕ ಅಕಾಡೆಮಿ ಮೈಸೂರಿನ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಶ್ರೀಧರ ಸಿ ಎಂ, ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ, ಅದ್ಯಾಪಕರುಗಳಾದ ವಿಜಯ್ ಕುಮಾರ್, ರಘು, ಸ್ವಾಮಿ, ಲಕ್ಮಿವೆಂಕಟೇಶ್, ಜಯಪ್ರಕಾಶ್, ಪವನ್ ಕಲ್ಯಾಣ್, ಕೋಚ್ ಮಂಜು,ಎಸ್ ಎ ಎಂ ಸ್ಟುಡಿಯೋ ದಿಲೀಪ್, ಸಹ ಸಿಬ್ಬಂದಿ ಚೇತನ್, ಕಾರ್ತಿಕ್, ನಂದನ್ ಕುಮಾರ್, ಧನುಷ್, ಗಾನವಿ, ಇಂಚರ, ತೃಪ್ತಿ ಮತ್ತಿತರರು ಉಪಸ್ಥಿತರಿದ್ದರು.