Sat. Apr 19th, 2025

ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ದಸರಾ ವಿಶೇಷ: ಸಿದ್ದರಾಮಯ್ಯ

Share this with Friends

ಮೈಸೂರು: ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ಇತಿಹಾಸ ಪ್ರಸಿದ್ಧ ದಸರಾ ಹಬ್ಬದ ವಿಶೇಷ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅರಮನೆ ಮುಂಭಾಗ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಜಂಬೂ‌ ಸವಾರಿಗೂ ಮೊದಲು ನಡೆಯುವ ಸಾಂಪ್ರದಾಯಿಕ ನಂದಿ ಧ್ವಜಕ್ಕೆ ಶುಭ ಮಕರ‌‌ ಲಗ್ನದಲ್ಲಿ ಪುಷ್ಪನಮನ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದ ಜನರಿಗೆ‌ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ ಮುಖ್ಯ ಮಂತ್ರಿಗಳು,ಇದೊಂದು‌ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.

ಕಳೆದ ಬಾರಿ ಸರಿಯಾಗಿ ಮಳೆ ಆಗದೆ ಬರ ಪರಿಸ್ಥಿತಿ ಎದುರಾಗಿತ್ತು ಹಾಗಾಗಿ ಸರಳ ದಸರಾ ಆಚರಣೆ ಮಾಡಲಾಗಿತ್ತು ಎಂದು ಹೇಳಿದರು.

ಈ‌ ಬಾರಿ ರಾಜ್ಯಾದ್ಯಂತ ಚೆನ್ನಾಗಿ‌ ಮಳೆ ಆಗಿದೆ.ಎಲ್ಲೂ ಬರ ಪರಿಸ್ಥಿತಿ ಇಲ್ಲ ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪನವರಿಗೆ ಅದ್ಧೂರಿ ದಸರಾ ಆಚರಣೆಗೆ ಹೇಳಿದ್ದೆ.ಇದು ನಾಡಹಬ್ಬ ಅದ್ದೂರಿಯಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರೊಂದಿಗೆ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ,ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿರರು ಹಾಜರಿದ್ದರು.


Share this with Friends

Related Post