Tue. Dec 24th, 2024

ಇನ್ನೂ10 ದಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ:ಡಿ.ಕೆ.ಶಿವಕುಮಾರ್

Share this with Friends

ಮೈಸೂರು: ಈ ಬಾರಿ ದಸರಾ ದೀಪಾಲಂಕಾರ ಇನ್ನೂ ಹತ್ತು ದಿನಗಳ ಕಾಲ ಮುಂದುವರಿಯಲಿದೆ ಎಂದು ‌ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಂದಿ ಧ್ವಜಕ್ಕೆ ಸಿಎಂ‌ ಸಿದ್ದರಾಮಯ್ಯ ಅವರ ಜತೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ‌ ಬಾರಿ ಅದ್ದೂರಿ ದಸರಾ‌ ಆಚರಣೆ ಮಾಡಲಾಗಿದೆ, ದೀಪಾಲಂಕಾರ ಅದ್ಭುತವಾಗಿದೆ, ಜನತೆ ಮೈಸೂರಿಗೆ ಬರಬೇಕು ಇದನ್ನೆಲ್ಲ ಕಣ್ ತುಂಬಿಕೊಳ್ಳಬೇಕು ಎಂದು ಕರೆ ನೀಡಿದರು.

ದಸರಾ ಇಂದು‌ ಮುಕ್ತಾಯ ಆದರೂ ಕೂಡಾ ಇನ್ನೂ ಹತ್ತು ದಿನಗಳವರೆಗೂ ದೀಪಾಲಂಕಾರ ಇರಲಿದೆ ಜನ ನೋಡಬೇಕು ಎಂದು ಹೇಳಿದರು. ಇದೇ‌ ವೇಳೆ ಡಿಕೆಶಿ ರಾಜ್ಯದ ಜನತೆಗೆ ದಸರಾ ಹಬ್ಬದ ಶುಭಾಶಯ ಸಲ್ಲಿಸಿದರು.


Share this with Friends

Related Post