Sat. Apr 19th, 2025

ಬೋನಿಗೆ ಬಿದ್ದ ಚಿರತೆ:ನಿಲ್ಲದ‌ ಆತಂಕ

Share this with Friends

ಎಚ್.ಡಿ.ಕೋಟೆ: ಪಟ್ಟಣದ ಡ್ರೈವರ್ ಕಾಲೋನಿ‌ ಸಮೀಪ ಏಳು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು ಜನರು ಸಧ್ಯಕ್ಕೆ ನಿಟ್ಟುಸಿರು ಬಿಟ್ಟರೂ ಆತಂಕ ದೂರವಾಗಿಲ್ಲ.

ಒಂದು ವಾರದಲ್ಲಿ ಇದೇ ಸ್ಥಳದಲ್ಲಿ ಎರಡು ಗಂಡು ಚಿರತೆಗಳು ಬೋನಿಗೆ ಬಿದ್ದಿದ್ದವು, ಈಗ ಮೂರನೇ ಚಿರತೆ ಸಿಕ್ಕಿರುವುದರಿಂದ ಇನ್ನೂ ಚಿರತೆಗಳು ಇರಬಹುದೆಂದು ರೈತರು ಹೇಳುತ್ತಿದ್ದಾರೆ.

ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಕೋಟೆ ವಲಯ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.

ಕಳೆದ ಒಂದು ವಾರದ ಹಿಂದೆ ಸಮೀಪದ ಜಮೀನಿನ ರೈತ ಗುಂಡು ಮಲ್ಲು ಅವರ ಜಮೀನಿನಲ್ಲಿ 5 ವರ್ಷದ ಗಂಡು ಚಿರತೆ ಸಿಕ್ಕಿತ್ತು,ಮತ್ತೆ ಮೂರು ದಿನಗಳ ನಂತರ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು,ಈಗ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ, ಸಧ್ಯಕ್ಕೆ ಇಲ್ಲಿನ ಜನ ನಿಟ್ಟುಸಿರು ಬಿಟ್ಟರೂ ಚಿರತೆ ಸೇರಿದಂತೆ ಇನ್ನೂ ಕಾಡುಪ್ರಾಣಿ ಗಳಿರಬಹುದೆಂದು ಆತಂಕ ಪಡುತ್ತಿದ್ದಾರೆ.


Share this with Friends

Related Post