Mon. Dec 23rd, 2024

ಮನೆಗಳ ಬೀಗ ಮುರಿದು ಚಿನ್ನದ ಆಭರಣ ಕದ್ದು ಮಾರುತ್ತಿದ್ದ ಕಳ್ಳ ಅರೆಸ್ಟ್

Share this with Friends

ಬೆಂಗಳೂರು, ಫೆ.20: ಮನೆಗಳ ಬೀಗ ಮುರಿದು ಚಿನ್ನದ ಆಭರಣಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಕತರ್ನಾಕ್ ಕಳ್ಳನನ್ನು
ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್ ನಿವಾಸಿ ಸುನೀಲ (31)ಬಂಧಿತ ಆರೋಪಿಯಾಗಿದ್ದು,ಪೊಲೀಸ್ ಆಯುಕ್ತ ದಯಾನಂದ್ ಅವರು ಕಳ್ಳ ಕದ್ದಿದ್ದ ಮಾಲನ್ನು ವೀಕ್ಷಿಸಿದರು.

ಈ ಕತರ್ನಾಕ್ ಕಳ್ಳ ಆಭರಣ ಮಾರಿ ಬಂದ ಹಣದಿಂದ ದುಶ್ಚಟಗಳಿಗೆ ಹಾಗೂ ಆನ್‌ಲೈನ್ ಬೆಟ್ಟಿಂಗ್‌ಗೆ ಉಪಯೋಗಿಸುತ್ತಿದ್ದ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.

ಆರೋಪಿಯು ಮೈಕೋ ಲೇಔಟ್ ಮತ್ತು ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ ಮನೆಗಳ ಮುಂದೆ ಸುತ್ತಾಡುತ್ತಾ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ತಿಳಿದುಕೊಂಡು ಅಂತಹ ಮನೆಗಳಲ್ಲಿ ಹಗಲಿನಲ್ಲೇ ಕಳ್ಳತನ ಮಾಡುತ್ತಿದ್ದ,ಈತನಿಂದ 30.15 ಲಕ್ಷ ಬೆಲೆಯ 525 ಗ್ರಾಂ ತೂಕದ ಆಭರಣಗಳು, 550 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ 2 ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಳ್ಳನ ವಿರುದ್ಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖ ಲಾಗಿದ್ದ ಒಟ್ಟು 11 ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಕಮಿಷನರ್ ತಿಳಿಸಿದರು.

ಆಗ್ನೆಯ ವಿಭಾಗದ ಉಪ ಆಯುಕ್ತ ಸಿ.ಕೆ.ಬಾಬಾ ಅವರ ಮಾರ್ಗ ದರ್ಶನದಲ್ಲಿ ಮತ್ತು ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಮನೋಜ್ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಗಿರೀಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Share this with Friends

Related Post