Mon. Dec 23rd, 2024

ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ

Share this with Friends

ಹೆಚ್.ಡಿ.ಕೋಟೆ: ನಾಲ್ಕೈದು ದಿನಗಳ ಹಿಂದಷ್ಟೆ ಹೆಚ್.ಡಿ.ಕೋಟೆಯಲ್ಲಿ ಚಿರತೆ ಸೆರೆಯಾಗಿ ಜನ ನಿಟ್ಟುಸಿರು‌ ಬಿಡುವಾಗಲೇ ಮತ್ತೊಂದು‌ ಚಿರತೆ ಸೆರೆಸಿಕ್ಕಿದ್ದು ತೀವ್ರ ಆತಂಕ ಸೃಷ್ಟಿಸಿದೆ.

ಒಂದೇ ತಿಂಗಳಲ್ಲಿ ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ ಸಿಕ್ಕಿದ್ದು ಇನ್ನಷ್ಟು ಆತಂಕ ಮೂಡಿಸಿದೆ.

ನಾಲ್ಕೈದು ದಿನಗಳ ಹಿಂದಷ್ಟೆ ಮೂರನೇ ಚಿರತೆ ಸೆರೆಯಾಗಿತ್ತು.ಇದೀಗ ಅದೇ ಸ್ಥಳದಲ್ಲೇ ಮತ್ತೊಂದು ಚಿರತೆ ಸೆರೆಯಾಗಿದೆ.

ಹೆಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸಮೀಪದ ಗುರುಮಲ್ಲು ಅವರ ಜಮೀನಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

‌ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ,ಆದರೆ ಜನರಲ್ಲಿ ಆತಂಕ ದೂರವಾಗಿಲ್ಲ.

ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು.ಅದೇ ಜಮೀನಿನಲ್ಲಿ ಇನ್ನೂ ಹಲವು ಚಿರತೆಗಳಿರಬಹುದೆಂದು ರೈತರು ಆತಂಕಪಟ್ಟಿದ್ದಾರೆ.


Share this with Friends

Related Post