Mon. Dec 23rd, 2024

ಬಿಜೆಪಿ ಮನೆ ಮನೆ ಸದಸ್ಯತ್ವ ಅಭಿಯಾನ

Share this with Friends

ಮೈಸೂರು: ಮೈಸೂರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಇಲವಾಲ‌ ಮಹಾಶಕ್ತಿ ಕೇಂದ್ರದ ಬೆಳವಾಡಿ ಗ್ರಾಮದಲ್ಲಿ ಬಿಜೆಪಿ ಮನೆ ಮನೆ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೋನಿಕಾ. ಎಂ ಅವರು,
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಮತ್ತು ಕಾಯಕ ಸಿದ್ದಾಂತದ ಅಡಿಯಲ್ಲಿ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.

ಬಡವರು ಮತ್ತು ಮಧ್ಯಮ ವರ್ಗದವರು ಆರ್ಥಿಕವಾಗಿ ಸಬಲರಾಗಲು ಜನಧನ್, ಉಜ್ವಲ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್, ಮುದ್ರಾ ಯೋಜನೆಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.

ದೇಶದಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಿದ್ದು, ಅವರ ಸಾಮರ್ಥ್ಯ ದೇಶದ ಅಭಿವೃದ್ದಿಗೆ ಬಳಕೆಯಾಗಬೇಕು ಎಂದು ಅಭಿಪ್ರಾಯ‌ ಪಟ್ಟರು.

ಕ್ಷೇತ್ರ ಒಬಿಸಿ ಉಪಾಧ್ಯಕ್ಷೆ ಗೀತಾ, ಬೂತ್ ಕಾರ್ಯದರ್ಶಿ ಮಣಿಯಮ್ಮ, ಆಶಾ, ಸುಗುಣ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post