Mon. Dec 23rd, 2024

ಮಳೆಗೆ ರಸ್ತೆ ಕುಸಿದು 15 ಅಡಿ‌ ಕಂದಕ ನಿರ್ಮಾಣ

Share this with Friends

ಮೈಸೂರು:‌ ಸತತ ಮಳೆಗೆ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ಸಮೀಪ ರಸ್ತೆ ಕುಸಿದುಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡಿದೆ.

ಮಣ್ಣು ಕುಸಿದ ಪರಿಣಾಮ ರಸ್ತೆಯಲ್ಲಿ ಸುಮಾರು 15 ಅಡಿಯಷ್ಟು ಆಳದ ಕಂದಕ ನಿರ್ಮಾಣವಾಗಿದ್ದು ರಸ್ತೆ ಯಲ್ಲಿ ಸಂಚರಿಸುವವರು ಯಾಮಾರಿದರೆ ಅನಾಹುತ ತಪ್ಪಿದ್ದಲ್ಲ.

ಸ್ಥಳಕ್ಕೆ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ರಸ್ತೆಯಲ್ಲಿ ಸಂಚರಿಸುವವರು ಹುಷಾರಾಗಿ ಚಲಿಸಬೇಕಿದೆ.ಕಂದಕದ ಸುತ್ತ ಬೋರ್ಡ್ ಹಾಕಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


Share this with Friends

Related Post