Mon. Dec 23rd, 2024

ಉಪ ಚುನಾವಣೆ ಕಾಂಗ್ರೆಸ್ ಗೆ ಗೆಲುವು:ಹರೀಶ್ ಗೌಡ

Share this with Friends

ಮೈಸೂರು: ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ತೌಸೆಂಡ್ ಪರ್ಸೆಂಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಶಾಸಕ ಹರೀಶ್ ಗೌಡ ಹೇಳಿದ್ದಾರೆ.

ಮೈಸೂರಿನ ವಾರ್ಡ್ 23ರ
ಕೊಲ್ಲಾಪುರದಮ್ಮ ದೇವಸ್ಥಾನದ ಹಿಂಭಾಗ
ಅಂದಾಜು 3.5 ಲಕ್ಷ ವೆಚ್ಚದ
ಕೊಳವೆಬಾವಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು

ಅಧಿಕಾರದಲ್ಲಿ ನಮ್ಮ ಸರ್ಕಾರ ಇದೆ,ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ, ಉಪ ಮುಖ್ಯ ಮಂತ್ರಿ‌ ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಚತುರತೆಯಿಂದ ನಮಗೆ ಗೆಲುವು‌ ಖಚಿತ, ಜನತೆ ಕಾಂಗ್ರೆಸ್ ಪಕ್ಷದ ಪರ ಇದ್ದಾರೆ ಎಂದು ಹೇಳಿದರು.

ವಾರ್ಡ್ 23 ರ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ ಹಾಗಾಗಿ ಬೋರ್ ವೆಲ್ ಕನೆಕ್ಷನ್ ಕೊಡುವ ಕೆಲಸ ಮಾಡಲಾಗುತ್ತಿದೆ.ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಈ ವೇಳೆ ಹರೀಶ್ ಗೌಡ ಭರವಸೆ ನೀಡಿದರು.

ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ನಾಗಭೂಷಣ , ಕಾಂಗ್ರೆಸ್ ಮುಖಂಡರುಗಳಾದ ರಾಜೀವ, ಮಹದೇವ, ಆನಂದ, ರವಿಚಂದ್ರ, ಮಂಜುನಾಥ,ಶಾಂತ ,ಮಂಗಳ, ಸಂಜಯ, ಲೋಕೇಶ,ಮುಸ್ತಾಫ ,ಯುಜಿಡಿ ವಾಟರ್ ಸಪ್ಲೈ ಅಧಿಕಾರಿ ಜಗದೀಶ್ ಆರ್, ವಾಟರ್ ಇನ್ಸ್ಪೆಕ್ಟರ್ ಮಹದೇವ್ ಹಾಗೂ ಅನೇಕ ಮುಖಂಡರು ಹಾಜರಿದ್ದರು.


Share this with Friends

Related Post