ಮೈಸೂರು: ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಶಾರದಾ ಪೀಠದ 36ನೇ ಪೀಠಾಧಿಪತಿಗಳಾದ ನಂತರ ಶ್ರೀಮಠವು ಹೆಚ್ಚು ಪ್ರಗತಿ ಹೊಂದಿದೆ ಎಂದು ಶಾಸಕ ಟಿ.ಎಸ್ ಶ್ರೀವತ್ಸ ಹೇಳಿದರು.
ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿರುವ ಸುಬ್ಬಣ್ಣ ಸಾರ್ವಜನಿಕ ಹಾಸ್ಟೆಲ್
ನಲ್ಲಿ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಜಗದ್ಗುರು ಶ್ರೀಭಾರತೀತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿ ಕೊಂಡಿದ್ದ ಸೇವಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ ಲೇಖನಿ ಸಾಮಗ್ರಿ, ಹಣ್ಣು ಹಂಪಲು ವಿತರಸಿ ಟಿ ಎಸ್ ಶ್ರೀವತ್ಸ ಮಾತನಾಡಿದರು.
ಜಗದ್ಗುರು ಅಭಿನವ ವಿದ್ಯಾತೀರ್ಥರ ಶಿಷ್ಯರಾಗಿ 1974ರಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಹಿರಿಯ ಜಗದ್ಗುರುಗಳೊಂದಿಗೆ ಧರ್ಮ ಪ್ರಚಾರ ಕ್ಕಾಗಿ ದೇಶದ ಉದ್ದಗಲಕ್ಕೆ ಸಂಚರಿಸಿ ದ್ದಲ್ಲದೆ, ತಾವು ಸಹ ಹಲವು ಬಾರಿ ಧರ್ಮ ಪ್ರಚಾರದ ದಿಗ್ವಿಜಯ ಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಮಠಕ್ಕೆ ಬರುವ ಎಲ್ಲ ಭಕ್ತರಿಗೆ ಅನ್ನ ದಾಸೋಹ ಹಾಗೂ ತಾಲೂಕು ಮತ್ತು ಸಮೀಪದ ತಾಲೂಕು ಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದರು. ಸಮಾಜದಲ್ಲಿ ಹಲವಾರು ಸೇವಾ ಕಾರ್ಯಗಳಲ್ಲಿ ಶೃಂಗೇರಿ ಮಠ ಮುಖ್ಯಪಾತ್ರ ವಹಿಸಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನo ಶ್ರೀಕಂಠ ಕುಮಾರ್ ಮಾತನಾಡಿ,ಪ್ರಸ್ತುತ ಶೃಂಗೇರಿ ಶ್ರೀ ಶಾರದಾ ಪೀಠದ 36ನೇ ಪೀಠಾಧಿಪತಿಗಳಾಗಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಗಳವರು 50 ವರ್ಷಗಳಿಂದ ಪರಂಪರೆಯಂತೆ ಸನಾತನ ಧರ್ಮವನ್ನು ರಕ್ಷಣೆ ಮಾಡುತ್ತಾ ಶ್ರೀ ಶಾರದಾಂಬೆ ಮತ್ತು ಶ್ರೀ ಚಂದ್ರಮೌಳೇಶ್ವರರನ್ನು ನಿತ್ಯ ಪೂಜಿಸುತ್ತಾ ಶೃಂಗೇರಿಯನ್ನು ಸರ್ವತೋಬಿ ಮುಖವಾಗಿ ಅಭಿವೃದ್ಧಿಗೊಳಿಸಿದ್ದಾರೆ ಎಂದು ತಿಳಿಸಿದರು.
ಜಗದ್ಗುರು ಭಾರತಿ ತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವ ಅಂಗವಾಗಿ ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಮಹಾಸ್ವಾಮಿಗಳವರು ಶೃಂಗೇರಿಯಲ್ಲಿ ಜಗದ್ಗುರುಗಳ ರವರ ಸಮಕ್ಷಮದಲ್ಲಿ ಶ್ರೀ ಶಂಕರ ಭಗವದ್ ಪಾದ ಆಚಾರ್ಯರ 32 ಅಡಿ ಎತ್ತರದ ಸುಮಾರು 750 ಟನ್ ತೂಕದ ಭವ್ಯ ಶಿಲಾಮೂರ್ತಿಯನ್ನು ಲೋಕಾರ್ಪಣೆಯನ್ನು ಮಾಡಿರುವುದು ನಮ್ಮೆಲ್ಲಾ ಆರ್ಥಿಕ ಬಂಧುಗಳಿಗೆ ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಲಕ್ಷ ಮೋದಕ ,ನರಸಿಂಹ ಹೋಮ, ಪಂಚಾಕ್ಷರಿ ಹೋಮಗಳು ಯಶಸ್ವಿಯಾಗಿ ಆಚರಿಸಲಾಯಿತು
ಮೈಸೂರ್ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ,ನಗರ ಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್, ಎಂ ಡಿ ಪಾರ್ಥಸಾರಥಿ, ಕಡಕೋಳ ಜಗದೀಶ್, ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಎಂ ವಿ ನಾಗೇಂದ್ರ ಬಾಬು, ಟಿ ಎಸ್ ಅರುಣ್, ರಂಗನಾಥ್, ಪ್ರಶಾಂತ್, ಕೆ ಜೆ ರಮೇಶ್, ನಂದೀಶ್ ನಾಯಕ್, ಶ್ರೀಕಾಂತ್ ಕಶ್ಯಪ್, ವೀರಭದ್ರ ಸ್ವಾಮಿ, ಶ್ರೀಧರ್, ಛಾಯಾ ಯಶವಂತ್ ಕುಮಾರ್, ಮಹೇಶ್, ರಾಜೇಶ್, ಅಕ್ಷಯ್ ಪ್ರಿಯ ದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.