Sun. Dec 22nd, 2024

ಚಂದನವನದಲ್ಲಿ ಮತ್ತೊಂದು ದುರಂತ ಸಾವು : ನಟ, ನಿರ್ದೇಶಕ ಮಠ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು

Share this with Friends

ಬೆಂಗಳೂರು, ನ.03 : ಚಂದನವನದ ಪ್ರತಿಭಾನ್ವಿತ ನಿರ್ದೇಶಕ, ನಟ ಮಠ ಗುರುಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗುವುದರ ಮೂಲಕ ಬದುಕಿಗೆ ಅಂತ್ಯ ಹಾಡಿದ್ದಾರೆ.

ತಮ್ಮ ಬೆಂಗಳೂರಿನ ಪ್ಲಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ನಿರ್ದೇಶಕ ಗುರುಪ್ರಸಾದ್. ಆತ್ಮಹತ್ಯೆ ಮಾಡಿಕೊಂಡು ಹಲವು ದಿನಗಳೆ ಕಳೆದಿವೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಜೀವನದಲ್ಲಿ ವ್ಯಯಕ್ತಿಕ ಕಾರಣಗಳು, ಸಾಲಗಾರರ ಕಿರುಕುಳ, ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿರುವ ಕಾರಣ ಮಾನಸಿಕವಾಗಿ ಸಾಕಷ್ಟು ನೊಂದಿದ್ದರು. ಇತ್ತೀಚಿಗೆ ಆರ್ಥಿಕವಾಗಿ ತೊಂದರಯಲ್ಲಿರುವುದು ಕೂಡ ಆತ್ಮಹತ್ಯೆಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಚಂದನವನದಲ್ಲಿ ವಿಶೇಷವಾದ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಯಶಸನ್ನು ಪಡೆದಿದ್ದರು. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೆ ಸಲಾ, ರಂಗನಾಯಕ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಅದೆಮಾ ಎಂಬ ಚಿತ್ರದ ನಿರ್ದೇಶನ ಕೈಗೆತ್ತಿಕೊಂಡು ಕೆಲಸ ಮಾಡುತ್ತಿದ್ದರು. ಅಷ್ಟರಲ್ಲಾಗಲೇ ಗುರುಪ್ರಸಾದ್ ಅವರ ಆತ್ಮಹತ್ಯೆ ಚಂದನವನಕ್ಕೆ ಬರಸಿಡಿಲಿನಂತೆ ಬಂದಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ 2 ನವೆಂಬರ್ 1972 ರಲ್ಲಿ ಜನಿಸಿದ ಗುರು ಪ್ರಸಾದ್ ಇತ್ತೀಚಿಗೆ ಎರಡನೆ ಮದುವೆ ಆಗಿದ್ದರು ಎಂಬ ವಿಚಾರ ತಿಳಿಯುತ್ತಿದೆ. ಮೊದಲನೆ ಹೆಂಡತಿಗೆ ಒಬ್ಬ ಮಗಳಿದ್ದಾರೆ ಎಂಬ ಮಾಹಿತಿ ಇದೆ.


Share this with Friends

Related Post