Mon. Dec 23rd, 2024

ಹಸೆಮಣೆ ಏರಬೇಕಿದ್ದ ಕಾನ್ಸ್‌ಟೇಬಲ್ ಕೊಲೆ

Share this with Friends

ಹಾಸನ: ಹಸೆಮಣೆ ಏರಲು ಕೆಲವೆ ದಿನ‌ ಇರುವಾಗಲೆ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಕೊಲೆ ಮಾಡಿರುವ ಘಟನೆ ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ.

ತನ್ನ ವಿವಾಹ ಆಮಂತ್ರಣ ಪತ್ರಿಕೆ ವಿತರಿಸಿ ವಾಪಸಾಗುತ್ತಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ

ಕಾನ್ಸ್ ಸ್ಟೇಬಲ್‌ ರನ್ನು ಡಾಬಾ ವೃತ್ತದಲ್ಲಿ ಕಳೆದ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ ಸ್ಟೇಬಲ್, ಬಾಗೇಶಪುರ ಗ್ರಾಮದ ಹರೀಶ್.ವಿ (32) ಕೊಲೆಯಾದ ಕಾನ್ಸ್ ಸ್ಟೇಬಲ್.

ನ. 11 ರಂದು ಹರೀಶ್ ಆವರ ವಿವಾಹ ನಿಗದಿಯಾಗಿತ್ತು. ತಮ್ಮ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಿ ಸಂಬಂಧಿಕರನ್ನು ಆಹ್ವಾನಿಸಿ ರಾತ್ರಿ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು‌ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ.

ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು, ದುದ್ದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post